ರಾಜ್ಯದ 9 ಸಾಧಕರಿಗೆ ಪದ್ಮ ಪುರಸ್ಕಾರ

7

ರಾಜ್ಯದ 9 ಸಾಧಕರಿಗೆ ಪದ್ಮ ಪುರಸ್ಕಾರ

Published:
Updated:
ರಾಜ್ಯದ 9 ಸಾಧಕರಿಗೆ ಪದ್ಮ ಪುರಸ್ಕಾರ

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ 9 ಜನರು ಒಳಗೊಂಡಂತೆ ರಾಷ್ಟ್ರದ ಒಟ್ಟು 85 ಜನ ಸಾಧಕರು ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಮೂವರಿಗೆ ಪದ್ಮವಿಭೂಷಣ, 9 ಜನರಿಗೆ ಪದ್ಮಭೂಷಣ ಹಾಗೂ 73 ಜನ ಸಾಧಕರಿಗೆ ಪದ್ಮಶ್ರೀ ಗೌರವ ದೊರೆತಿದೆ.

ರಾಜ್ಯದ ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಅವರಿಗೆ ಪದ್ಮಭೂಷಣ ಪುರಸ್ಕಾರ ದೊರೆತಿದ್ದು, ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ತುಮಕೂರು ಜಿಲ್ಲೆ ಪಾವಗಡದ ಸೂಲಗಿತ್ತಿ ನರಸಮ್ಮ, ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಜನಪದ ಕಲಾವಿದ ಇಬ್ರಾಹಿಂ ಸುತಾರ್‌, ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಬೆಳಗಾವಿ ಜಿಲ್ಲೆಯ ಸೀತವ್ವ ಜೋಡಟ್ಟಿ, ಕವಿ ದೊಡ್ಡರಂಗೇಗೌಡ, ಸಂಗೀತ ಕಲಾವಿದರಾದ ಆರ್‌.ಸತ್ಯನಾರಾಯಣ, ರುದ್ರಪಟ್ಟಣಂ ತ್ಯಾಗರಾಜನ್‌ ಹಾಗೂ ತಾರಾನಾಥನ್‌ ಅವರು ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಕನ್ನಡಿಗರಾಗಿದ್ದಾರೆ. 

ತಮಿಳು ಚಿತ್ರರಂಗದ ಸಂಗೀತ ನಿರ್ದೇಶಕ ಇಳಯರಾಜ, ಮಹಾರಾಷ್ಟ್ರದ ಗುಲಾಂ ಮುಸ್ತಫಾ ಖಾನ್‌, ವಿಚಾರವಾದಿ ಕೇರಳದ ಪಿ.ಪರಮೇಶ್ವರನ್‌ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದು, ಭಾರತ ಕ್ರಿಕೆಟ್‌ ತಂಡದ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಪದ್ಮಭೂಷಣ ಗೌರವಕ್ಕೆ ಭಾಜನರಾಗಿದ್ದಾರೆ.

ಸೌಹಾರ್ದತೆಗೆ ಸಿಕ್ಕ ಫಲ: ಇಬ್ರಾಹಿಂ ಸುತಾರ ಪ್ರತಿಕ್ರಿಯೆ

ನನಗೆ ತುಂಬಾ ಖುಷಿಯಾಗಿದೆ. ಸೌಹಾರ್ದದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಕ್ಕೆ ಸಿಕ್ಕ ಫಲ. ದೇಶದ ಜನರ ಪರ, ನಾಡಿನ ಏಕತೆ, ಶಾಂತಿ, ಸೌಹಾರ್ದತೆ ಹಾಗೂ ಒಡೆದು ಹೋದ ಮನಸ್ಸುಗಳನ್ನು ಒಂದುಗೂಡಿಸಲು ಕೆಲಸ ಮಾಡಿದ ಎಲ್ಲ ಸಂತರಿಗೆ ಈ ಪ್ರಶಸ್ತಿ ಅರ್ಪಣೆ.

– ಇಬ್ರಾಹಿಂ ಎನ್‌.ಸುತಾರ

ಪರಿಚಯ: ಬಾಗಲಕೋಟ ಜಿಲ್ಲೆ, ಮುಧೋಳ ತಾಲ್ಲೂಕಿನ ಇಬ್ರಾಹಿಂ ಎನ್.ಸುತಾರ 1940ರ ಮೇ 10ರಂದು ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ ಸ್ಥಾಪಿಸಿದರು. 44 ವರ್ಷಗಳಿಂದ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆ ಮೂಲಕ ಹಿಂದೂ–ಮುಸ್ಲಿಮರಲ್ಲಿ ಭಾವೈಕ್ಯ ಸಂದೇಶ ಸಾರಿದ್ದಾರೆ.

* ಇವನ್ನೂ ಓದಿ...

ಜೀವ ತುಂಬಿದ ಸೂಲಗಿತ್ತಿಗೆ ಪದ್ಮಶ್ರೀ ಗರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry