ಸೈನಾ ನೆಹ್ವಾಲ್‌–ಸಿಂಧು ಮುಖಾಮುಖಿ

7

ಸೈನಾ ನೆಹ್ವಾಲ್‌–ಸಿಂಧು ಮುಖಾಮುಖಿ

Published:
Updated:
ಸೈನಾ ನೆಹ್ವಾಲ್‌–ಸಿಂಧು ಮುಖಾಮುಖಿ

ಜಕಾರ್ತ: ಭಾರತದ ಅಗ್ರ ರ‍್ಯಾಂಕಿಂಗ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

ಪಾದದ ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಸೈನಾ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗುರುವಾರ 21–12, 21–18ರಲ್ಲಿ ಚೀನಾದ ಚೆನ್ ಕ್ಸಿಯಾಕ್ಸಿನ್ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಸಿಂಧು 21–12, 21–9ರಲ್ಲಿ ಮಲೇಷ್ಯಾದ ಗೊ ಜಿನ್ ವೀ ವಿರುದ್ಧ ಗೆದ್ದರು. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸೈನಾ ಹಾಗೂ ಸಿಂಧು ಈವರೆಗು ಎರಡು ಬಾರಿ ಮಾತ್ರ ಮುಖಾಮುಖಿಯಾಗಿದ್ದಾರೆ. ಇಬ್ಬರೂ ಒಂದೊಂದು ಪಂದ್ಯದಲ್ಲಿ ಗೆದ್ದಿದ್ದಾರೆ.

2014ರ ಸೈಯದ್ ಮೋದಿ ಗ್ರ್ಯಾನ್‌ ಪ್ರಿ ಟೂರ್ನಿಯಲ್ಲಿ ಸೈನಾ ಅವರು ಸಿಂಧುಗೆ ಸೋಲುಣಿಸಿದ್ದರು. ಇಂಡಿಯಾ ಓಪನ್ ಸೂಪರ್ ಸೀರಿಸ್‌ನಲ್ಲಿ ಸಿಂಧು ಜಯಭೇರಿ ದಾಖಲಿಸಿದ್ದರು. ಹೋದ ವರ್ಷ ನಡೆದ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ ಸೈನಾ ಗೆಲುವು ಒಲಿಸಿಕೊಂಡಿದ್ದರು.

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಪಂದ್ಯದಲ್ಲಿ ಗಾಯಗೊಂಡಿದ್ದ ಸೈನಾ ಪಂದ್ಯದಿಂದ ಹಿಂದೆಸರಿದಿದ್ದರು.

ಸಾತ್ವಿಕ್ ಜೋಡಿಗೆ ಜಯ: ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಪ್ರೀ ಕ್ವಾರ್ಟರ್‌ ಪಂದ್ಯದಲ್ಲಿ ಅವರು 21–17, 21–16ರಲ್ಲಿ ಚೀನಾ ತೈಪೆಯ ಲಿಯಾವೊ ಮಿನ್ ಚುನ್ ಮತ್ತು ಸು ಚಿಂಗ್ ಹೆಂಗ್ ಜೋಡಿಯನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry