ಅಕ್ರಮ ವಲಸಿಗರಿಗೆ ಕಾಲಕ್ರಮೇಣ ಪೌರತ್ವ: ಟ್ರಂಪ್

7

ಅಕ್ರಮ ವಲಸಿಗರಿಗೆ ಕಾಲಕ್ರಮೇಣ ಪೌರತ್ವ: ಟ್ರಂಪ್

Published:
Updated:
ಅಕ್ರಮ ವಲಸಿಗರಿಗೆ ಕಾಲಕ್ರಮೇಣ ಪೌರತ್ವ: ಟ್ರಂಪ್

ವಾಷಿಂಗ್ಟನ್‌: ಅಕ್ರಮ ವಲಸಿಗರಿಗೆ ಪ್ರಯೋಜನ ಆಗುವಂಥ ಅಮೆರಿಕ ಪೌರತ್ವವನ್ನು ಇನ್ನು 10–12 ವರ್ಷಗಳಲ್ಲಿ ನೀಡಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದರು. ಇದೇ ಮೊದಲ ಬಾರಿಗೆ ಟ್ರಂಪ್‌ ಇಂಥದ್ದೊಂದು ಮಾಹಿತಿಯನ್ನು ಬಹಿರಂಗಪಡಿಸಿದರು.

ಬಾಲ್ಯದಿಂದಲೂ ಇಲ್ಲಿ ನೆಲೆಸಿರುವ ಸುಮಾರು 6.90ಲಕ್ಷ ಅಕ್ರಮ ವಲಸಿಗರಿಗೆ (ಡ್ರೀಮರ್ಸ್) ಅನುಕೂಲ ಆಗಲಿದೆ. ಇವರಲ್ಲಿ ಭಾರತದ ವಲಸಿಗರೂ ಸೇರಿದ್ದಾರೆ.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಶ್ವೇತಭವನದಲ್ಲಿ ಪತ್ರಕರ್ತರಿಗೆ ಟ್ರಂಪ್‌ ಈ ಮಾಹಿತಿ ನೀಡಿದರು.

‘ವಲಸಿಗರು ಪರಿಶ್ರಮದಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ಈ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿ’ ಎಂದು ಟ್ರಂಪ್‌ ನುಡಿದರು.

ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ನಂತರದಲ್ಲಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry