ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ: ಮೇ ದಿಗ್ಭ್ರಮೆ

7

ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ: ಮೇ ದಿಗ್ಭ್ರಮೆ

Published:
Updated:
ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ: ಮೇ ದಿಗ್ಭ್ರಮೆ

ಲಂಡನ್‌: 360ಕ್ಕೂ ಅಧಿಕ ರಾಜಕಾರಣಿಗಳು ಹಾಗೂ ಉದ್ಯಮಿಗಳು ಇಲ್ಲಿಯ ಡಾರ್ಚೆಸ್ಟರ್‌ ಹೋಟೆಲ್‌ನಲ್ಲಿ ನಡೆಸಿದ ಔತಣಕೂಟದಲ್ಲಿ ಪರಿಚಾರಿಕೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಸುದ್ದಿಯನ್ನು ಕೇಳಿ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಘಟನೆಯ ಕುರಿತು ‘ಫೈನಾನ್ಶಿಯಲ್‌ ಟೈಮ್ಸ್‌’ ಪತ್ರಿಕೆಯಲ್ಲಿ ಬಂದ ವರದಿಯನ್ನು ಉಲ್ಲೇಖಿಸಿ, ‘ಘಟನೆಯು ಅತ್ಯಂತ ಹೇಯ ಕೃತ್ಯವಾಗಿದೆ’ ಎಂದರು.

ರಾಜಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಮೌಲ್ಯ ಏನು ಎಂದು ತಿಳಿಸಲು ತಾವು ಶ್ರಮಿಸುವುದಾಗಿ ನುಡಿದರು. ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದರೆ ಸಂತ್ರಸ್ತೆಯರು ಪೊಲೀಸರಲ್ಲಿ ದೂರು ದಾಖಲು ಮಾಡಬೇಕಾದ ಅಗತ್ಯವಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry