ಯುವಕನ ಬಂಧನ ಅವಧಿ ಮುಗಿದರೂ ಬಿಡುಗಡೆ ಇಲ್ಲ!

7

ಯುವಕನ ಬಂಧನ ಅವಧಿ ಮುಗಿದರೂ ಬಿಡುಗಡೆ ಇಲ್ಲ!

Published:
Updated:
ಯುವಕನ ಬಂಧನ ಅವಧಿ ಮುಗಿದರೂ ಬಿಡುಗಡೆ ಇಲ್ಲ!

ಪೆಶಾವರ: ಆನ್‌ಲೈನ್‌ನಲ್ಲಿ ಪರಿಚಯವಾದ ಗೆಳತಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಅಕ್ರಮ ಪ್ರವೇಶಮಾಡಿ ಅಲ್ಲಿನ ಜೈಲಿನಲ್ಲಿ ಬಂಧಿಯಾಗಿರುವ ಮುಂಬೈ ಸಂಜಾತ ಹಮೀದ್‌ ಅನ್ಸಾರಿಯ ಶಿಕ್ಷೆಯ ಅವಧಿ ಮುಗಿದರೂ ಆತನ ಬಿಡುಗಡೆ ಇನ್ನೂ ಆಗಿಲ್ಲ! ಈತನಿಗೆ ಶಿಕ್ಷೆ ಆಗಿರುವ ಕುರಿತಾದ ದಾಖಲೆಗಳನ್ನು ಮೇಲಿನ ಕೋರ್ಟ್‌ಗೆ ಅಧಿಕಾರಿಗಳು ಇದುವರೆಗೆ ಸಲ್ಲಿಸದೇ ಇರುವ ಕಾರಣ ಹಮೀದ್‌ ಇನ್ನೂ ಜೈಲಿನಲ್ಲಿಯೇ ಇರಬೇಕಿದೆ.

ಎಂಜಿನಿಯರ್ ಆಗಿದ್ದ ಮುಂಬೈನ ಹಮೀದ್ ಅನ್ಸಾರಿ 2012ರಲ್ಲಿ ಅಫ್ಗಾನಿ

ಸ್ತಾನದ ಮೂಲಕ ಪಾಕಿಸ್ತಾನಕ್ಕೆ ಅಕ್ರಮ ಪ್ರವೇಶ ಮಾಡಿದ್ದ. ಅಲ್ಲಿ ಆತ ಗೂಢಚರ್ಯನೆಂದು ಆರೋಪಿಸಿ ಬಂಧಿಸಲಾಗಿತ್ತು. ಕೆಳಹಂತದ ಕೋರ್ಟ್‌ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಶಿಕ್ಷೆಯನ್ನು ಪ್ರಶ್ನಿಸಿ ಆತ ಪೆಶಾವರ ಹೈಕೋರ್ಟ್‌ ಮೊರೆ ಹೋಗಿದ್ದ.

ಈತನ ಬಂಧನದ ಕುರಿತಾದ ದಾಖಲೆಗಳನ್ನು ಹಾಜರು ಪಡಿಸುವಂತೆ ಅಧಿಕಾರಿಗಳಿಗೆ ಕೋರ್ಟ್‌ ಆದೇಶಿಸಿತ್ತು. ಆದರೆ ಇದುವರೆಗೂ ದಾಖಲೆ ಸಲ್ಲಿಸದ ಕಾರಣ, ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್‌ ಜ.31ರ ಒಳಗೆ ಸಲ್ಲಿಸುವಂತೆ ಹೇಳಿ ವಿಚಾರಣೆ ಮುಂದೂಡಿದೆ.

ದೂತಾವಾಸ ಕಚೇರಿ ಸಂಪರ್ಕಕ್ಕೆ ಅನ್ಸಾರಿಗೆ ಅವಕಾಶ ನೀಡುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ತಿಂಗಳ ಆರಂಭದಲ್ಲೇ ಕೋರಿದ್ದರೂ ಪಾಕಿಸ್ತಾನ ಅದಕ್ಕೆ ಪ್ರತಿಕ್ರಿಯಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry