ಸರ್ವೋತ್ತಮ ಸೇವಾ ಪ್ರಶಸ್ತಿ

7

ಸರ್ವೋತ್ತಮ ಸೇವಾ ಪ್ರಶಸ್ತಿ

Published:
Updated:

ಬೆಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ರಾಜ್ಯ ಸರ್ಕಾರ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು 2017–18ನೇ ಸಾಲಿನಲ್ಲಿ 12 ನೌಕರರಿಗೆ ನೀಡಲಾಗಿದೆ.

ಪ್ರಮಾಣ ಪತ್ರ ಮತ್ತು ತಲಾ₹ 25,000 ನಗದು ಪುರಸ್ಕಾರವನ್ನು ಈ ಪ್ರಶಸ್ತಿ ಒಳಗೊಂಡಿದೆ.

ಪ್ರಶಸ್ತಿ ಪಡೆದವರು: ಮುಖ್ಯ ಕಾರ್ಯದರ್ಶಿ ಆಪ್ತ ಶಾಖೆಯ ಜಮೇದಾರ್ ನರಸಿಂಹಲು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಾಖಾಧಿಕಾರಿ ಜಿ.ಆರ್‌. ಸಂದೇಶ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಪ್ತ ಶಾಖೆಯ ದಲಾಯತ್ ಸುಭಾಷಂದ್ರ ರೆಡ್ಡಿ, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಪ್ತಶಾಖೆಯ ಜಮೇದಾರ್‌ ಡಿ.ಆರ್‌. ರಾಜು,

ಉತ್ತರ ಕನ್ನಡ ಜಿಲ್ಲೆ ಶಿರಸಿ ವಿಭಾಗದ ಕೃಷಿ ಉಪನಿರ್ದೇಶಕ ಟಿ.ಎಚ್‌. ನಟರಾಜ, ಪಶುಸಂಗೋಪನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಟಿ. ಮಂಜುನಾಥ್‌, ಸಾರಿಗೆ ಇಲಾಖೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಪ್ರೇಮಲತಾ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಯ ಸ್ಥಾನಿಕ ಸಹಾಯಕ ಜಯಪ್ರಕಾಶ್, ಕಾರ್ಮಿಕ ಇಲಾಖೆಯ ಕೈಗಾರಿಕಾ ಸುರಕ್ಷತಾ ವಿಭಾಗದ ಉಪನಿರ್ದೇಶಕ ಡಿ.ಸಿ. ಜಗದೀಶ್, ಅರಣ್ಯ ಇಲಾಖೆಯ ಶಾಖಾಧಿಕಾರಿ ಉಮೇಶ್ ಶಾಸ್ತ್ರಿ, ಬೆಳಗಾವಿ ಜಿಲ್ಲಾ ಪೊಲೀಸ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿದ್ಯಾರಣ್ಯ ಗುರು ಶಾಂತಯ್ಯ ಹಿರೇಮಠ, ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಜಂಬಗಿ ಹಾಗೂ ವಡಗಾಂವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎ. ಶರತ್‌ಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry