ನೀನಾಸಂ, ಡಾಂಗೆ, ಕಾಮೇಗೌಡಗೆ ರಮಾಗೋವಿಂದ ಪುರಸ್ಕಾರ

7

ನೀನಾಸಂ, ಡಾಂಗೆ, ಕಾಮೇಗೌಡಗೆ ರಮಾಗೋವಿಂದ ಪುರಸ್ಕಾರ

Published:
Updated:
ನೀನಾಸಂ, ಡಾಂಗೆ, ಕಾಮೇಗೌಡಗೆ ರಮಾಗೋವಿಂದ ಪುರಸ್ಕಾರ

ಮೈಸೂರು: ಇಲ್ಲಿನ ರಮಾಬಾಯಿ ಚಾರಿಟಬಲ್ ಫೌಂಡೇಷನ್ ಹಾಗೂ ಗೋಪಿನಾಥ ಶೆಣೈ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ 2018ರ ರಮಾಗೋವಿಂದ ರಾಷ್ಟ್ರೀಯ ಪುರಸ್ಕಾರಕ್ಕೆ ಹೆಗ್ಗೋಡಿನ ನೀನಾಸಂ, ಮಳವಳ್ಳಿಯ ಪ್ರಕೃತಿ ಸಂರಕ್ಷಕ ಕಾಮೇಗೌಡ ಹಾಗೂ ಮಹಾರಾಷ್ಟ್ರದ ಗೋದಾವರಿ ಡಾಂಗೆ ಅವರು ಆಯ್ಕೆ ಆಗಿದ್ದಾರೆ.

‘ನೀನಾಸಂ’ ಸಂಸ್ಥೆಗೆ ₹ 5 ಲಕ್ಷ ನಗದು, ಪ್ರಶಸ್ತಿ ಫಲಕ ನೀಡಲಾಗುತ್ತದೆ. ಮಂಡ್ಯ ಜಿಲ್ಲೆ ಮಳವಳ್ಳಿ ಬಳಿಯ ಕುಂದೂರು ಬೆಟ್ಟದಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರಿಗಾಗಿ 8 ಕೆರೆಗಳನ್ನು ತೋಡಿಸಿದ ಕುರಿಗಾಯಿ ಕಾಮೇಗೌಡ ಹಾಗೂ ಬರಗಾಲಕ್ಕೆ ಎದೆಯೊಡ್ಡಿ ಜಮೀನು, ಜಾನುವಾರು, ಅರಣ್ಯ, ಜನಸಮುದಾಯವನ್ನು ಕಾಪಾಡಿದ ಮಹಾರಾಷ್ಟ್ರದ ಉಸ್ಮಾನಾಬಾದ್‌ನ ಗೋದಾವರಿ ಡಾಂಗೆ ಅವರಿಗೆ ತಲಾ ₹ 3 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಕೊಡಲಾಗುತ್ತದೆ ಎಂದು ರಮಾಬಾಯಿ ಚಾರಿಟಬಲ್ ಫೌಂಡೇಷನ್ ಟ್ರಸ್ಟಿಗಳಾದ ಎಂ.ಜಗನ್ನಾಥ ಶೆಣೈ, ಎಂ.ಗೋಪಿನಾಥ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಜ.28ರಂದು ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry