ರಾಹುಲ್‌ ಗಾಂಧಿ ಪ್ರವಾಸಕ್ಕಾಗಿ ರಾಜ್ಯಕ್ಕೆ ಬಂದ ವಿಶೇಷ ಬಸ್‌

7

ರಾಹುಲ್‌ ಗಾಂಧಿ ಪ್ರವಾಸಕ್ಕಾಗಿ ರಾಜ್ಯಕ್ಕೆ ಬಂದ ವಿಶೇಷ ಬಸ್‌

Published:
Updated:
ರಾಹುಲ್‌ ಗಾಂಧಿ ಪ್ರವಾಸಕ್ಕಾಗಿ ರಾಜ್ಯಕ್ಕೆ ಬಂದ ವಿಶೇಷ ಬಸ್‌

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಮಾಡಲು ಬಳಕೆ ಮಾಡಲಿರುವ ವಿಶೇಷ ಬಸ್‌ ಗುಜರಾತಿನಿಂದ ಬೆಂಗಳೂರಿಗೆ ಬಂದಿದೆ.

ಇತ್ತೀಚೆಗೆ ನಡೆದ ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್‌ ಗಾಂಧಿ ಇದೇ ಬಸ್‌ ಬಳಸಿದ್ದರು. ವಿಶೇಷವಾಗಿ ವಿನ್ಯಾಸಗೊಳಿಸಿರುವ ಈ ಬಸ್‌ನಲ್ಲೇ ಕಾಂಗ್ರೆಸ್‌ ಅಧ್ಯಕ್ಷರು ಕರ್ನಾಟಕ ಸುತ್ತುವ ಕಾರ್ಯಕ್ರಮವಿದೆ. ಇದೇ 10ರಿಂದ ಮೂರು ದಿನ ಹೈದರಾಬಾದ್‌ ಕರ್ನಾಟಕದಲ್ಲಿ ಸುತ್ತಾಡುವ ರಾಹುಲ್ ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸುಮಾರು 12 ಸಲ ರಾಜ್ಯಕ್ಕೆ ಭೇಟಿ ಕೊಡಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry