ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ‘ಯು’ ಪ್ರಮಾಣಪತ್ರ

Last Updated 25 ಜನವರಿ 2018, 19:32 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತದಲ್ಲಿ ಭಾರಿ ಗದ್ದಲಕ್ಕೆ ಕಾರಣವಾದ ‘ಪದ್ಮಾವತ್‌’ ಸಿನಿಮಾಕ್ಕೆ ಪಾಕಿಸ್ತಾನದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರ ನೀಡಿದೆ. ಯಾವುದೇ ದೃಶ್ಯ ಅಥವಾ ಸಂಭಾಷಣೆಯನ್ನು ಕತ್ತರಿಸಲು ಸಿಬಿಎಫ್‌ಸಿ ಸೂಚಿಸಿಲ್ಲ.

ದೆಹಲಿಯ ಸುಲ್ತಾನನಾಗಿದ್ದ ಅಲ್ಲಾವುದ್ದೀನ್‌ ಖಿಲ್ಜಿಯನ್ನು ನಕಾರಾತ್ಮಕವಾಗಿ ಚಿತ್ರಿಸಿದ್ದರಿಂದ ಪಾಕಿಸ್ತಾನದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗದು ಎಂಬ ಭೀತಿ ನಿರ್ಮಾಪಕರಲ್ಲಿ ಇತ್ತು.

‘ಕಲೆ, ಸೃಜನಶೀಲತೆ ಮತ್ತು ಆರೋಗ್ಯಕರ ಮನರಂಜನೆ ವಿಚಾರದಲ್ಲಿ ಸಿಬಿಎಫ್‌ಸಿ ಪೂರ್ವಗ್ರಹ ಹೊಂದಿಲ್ಲ’ ಎಂದು ಸಿಬಿಎಫ್‌ಸಿ ಅಧ್ಯಕ್ಷ ಮೊಬಸ್ಸಿರ್‌ ಹಸನ್‌ ಹೇಳಿದ್ದಾರೆ.

ಇಸ್ಲಾಮಾಬಾದ್‌ನ ಖೈದ್‌–ಎ–ಅಜಂ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ವಕಾರ್‌ ಅಲಿ ಶಾ ಅವರನ್ನು ಸಿನಿಮಾ ನೋಡಲು ಸಿಬಿಎಫ್‌ಸಿ ಆಹ್ವಾನಿಸಿತ್ತು. ಚಾರಿತ್ರಿಕ ಉಲ್ಲೇಖಗಳ ಸತ್ಯಾಸತ್ಯತೆಯನ್ನು ಪ‍ರಿಶೀಲಿಸುವಂತೆ ಅವರನ್ನು ಕೋರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT