ಕೆಲಸದಿಂದ ತೆಗೆದುಬಿಟ್ಟಾರು: ಡಿಕೆಶಿ

7

ಕೆಲಸದಿಂದ ತೆಗೆದುಬಿಟ್ಟಾರು: ಡಿಕೆಶಿ

Published:
Updated:
ಕೆಲಸದಿಂದ ತೆಗೆದುಬಿಟ್ಟಾರು: ಡಿಕೆಶಿ

ಬಂಗಾರಪೇಟೆ: ‘ನಾನು ಮುಂದಿನ ಮುಖ್ಯಮಂತ್ರಿ ಎಂದು ಜೋರಾಗಿ ಹೇಳಬೇಡಿ. ಅದು ಸಿದ್ದರಾಮಯ್ಯ ಅವರಿಗೆ ಕೇಳಿಸಿದರೆ ನನ್ನನ್ನು ಕೆಲಸದಿಂದ ತೆಗೆದುಬಿಟ್ಟಾರು’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಕೆಂಪೇಗೌಡ ವೃತ್ತ ಮತ್ತು ಕೆಂಪೇಗೌಡ ಜೋಡಿ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುವಾಗ ವೇದಿಕೆ ಮುಂಭಾಗ ಇದ್ದ ಕೆಲವರು ‘ಡಿ.ಕೆ.ಶಿ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದಕ್ಕೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಆಗುವ ಗಳಿಗೆ ಕೂಡಿ ಬಂದರೆ ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ. ಸದ್ಯಕ್ಕೆ ಆ ಬಗ್ಗೆ ಚರ್ಚೆ ಬೇಡ’ ಎಂದರು.

ಮಾತನಾಡುವಾಗ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮ ಬಳಿ ಬಂದು ನಿಂತಿದ್ದನ್ನು ಗಮನಿಸಿದ ಶಿವಕುಮಾರ್, ‘ಕುರ್ಚಿಯಿಂದ ಪದೇ ಪದೇ ಎದ್ದು ಬರಬೇಡಿ. ಕುರ್ಚಿ ಸಿಗುವುದೇ ಕಷ್ಟ. ಸಿಕ್ಕಾಗ ಬಿಡಬಾರದು. ನಾನಂತೂ ಬಿಡುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry