ಪ್ರೇಮವಿವಾಹವಾದ ಯುವತಿಯ ತಲೆ ಬೋಳಿಸಿದ ಪೋಷಕರು

7

ಪ್ರೇಮವಿವಾಹವಾದ ಯುವತಿಯ ತಲೆ ಬೋಳಿಸಿದ ಪೋಷಕರು

Published:
Updated:
ಪ್ರೇಮವಿವಾಹವಾದ ಯುವತಿಯ ತಲೆ ಬೋಳಿಸಿದ ಪೋಷಕರು

ಹೈದರಾಬಾದ್: ತನ್ನಿಷ್ಟದ ಹುಡುಗನನ್ನು ಮದುವೆಯಾದದ್ದಕ್ಕೆ ಆ ಯುವತಿಯ ಪೋಷಕರು ಆಕೆಯ ತಲೆ ಬೋಳಿಸಿದ ಸಂಗತಿ ವಾರಂಗಲ್ ಪಾಲಿಕೆ ವ್ಯಾಪ್ತಿಯ ಪೈದಿಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕಳೆದ ಡಿಸೆಂಬರ್ 28ರಂದು 23 ವರ್ಷದ ಜನ್ನು ವೀಣಾ ಮತ್ತು ಮಂಧಾ ಪ್ರವೀಣ್ ಎಂಬುವವರು ಮದುವೆಯಾಗಿ ದ್ದರು. ಇಬ್ಬರೂ ನೆರೆಹೊರೆಯವರಾಗಿದ್ದು, ಚಿಕ್ಕಂದಿನಿಂದಲೂ ಜತೆಗೇ ಬೆಳೆದವರು. ಇಬ್ಬರೂ ಒಂದೇ ಜಾತಿ ಯವರು. ಕೆಲ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು.

ಕುಟುಂಬದವರು ತೊಂದರೆ ಮಾಡಬಹುದು ಎಂಬ ಭಯದಿಂದ ಮದುವೆಯಾದ ನಂತರ ಕೆಲ ದಿನಗಳ ಕಾಲ ತಮ್ಮ ಗ್ರಾಮದಿಂದ ದೂರವಿದ್ದರು. ಸ್ಥಳೀಯ ಕಾರ್ಪೊರೇಟರ್ ವೀರ ಭಿಕ್ಷಾಪತಿ ಅವರ ಬಳಿ ತೆರಳಿ ತೊಂದರೆ ನೀಡದಂತೆ ನಮ್ಮ ಪೋಷಕರಿಗೆ ತಿಳಿಸಿ ಎಂದು ಮನವಿ ಮಾಡಿದ್ದರು.

ವೀಣಾ ಮತ್ತು ಪ್ರವೀಣ್ ಕೋರಿಕೆಯಂತೆ ಅವರ ಪೋಷಕರನ್ನು ಕರೆಸಿ, ದಂಪತಿಗೆ ತೊಂದರೆ ನೀಡಬೇಡಿ, ಅವರ ಪಾಡಿಗೆ ಇರಲು ಬಿಡಿ ಎಂದು ವೀರ ಭಿಕ್ಷಾಪತಿ ಸೂಚಿಸಿದ್ದರು. ಹೀಗಾಗಿ ದಂಪತಿ, ಪುನಃ ತಮ್ಮ ಗ್ರಾಮಕ್ಕೆ ಬಂದು ವಾಸಿಸಲಾರಂಭಿಸಿದ್ದರು.

ಸೋಮವಾರ ವೀಣಾ ಸೋದರರು ಮತ್ತು ನಾದಿನಿಯರು ಈ ದಂಪತಿ ಮನೆಗೆ ಬಂದಿದ್ದರು. ಮಾತುಕತೆ ಮೂಲಕ ಮದುವೆ ವಿಚಾರ ಬಗೆಹರಿಸಿ ಕೊಳ್ಳೋಣ ಎಂದು ದಂಪತಿಯನ್ನು ಜಮ್ಮಿಕುಂಟ ಗ್ರಾಮದ ಆಕೆಯ ಸೋದರಮಾವನ ಮನೆಗೆ ಕರೆದೊಯ್ದಿದ್ದಾರೆ. ನಂತರ ವೀಣಾ ಅವರಿಗೆ ಮಾದಕವಸ್ತು ನೀಡಿ, ಆಕೆಯ ತಲೆ ಬೋಳಿಸಿದ್ದಾರೆ.

ಕ್ಷೌರಿಕನ ಸಹಾಯದೊಂದಿಗೆ ವೀಣಾ ಅವರ ತಲೆ ಬೋಳಿಸುವಂತೆ ಪ್ರವೀಣ್‌ ಅವರಿಗೆ ಬಲವಂತ ಮಾಡಲಾಗಿತ್ತು ಎಂದು ಹಸನ್‌ಪರ್ಥಿ ಪೊಲೀಸ್ ಇನ್‌ಸ್ಪೆಕ್ಟರ್‌ ಬಿ.ಕಿಷನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry