ಅಡೆತಡೆ ಇಲ್ಲದೆ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಜನ

7

ಅಡೆತಡೆ ಇಲ್ಲದೆ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಜನ

Published:
Updated:
ಅಡೆತಡೆ ಇಲ್ಲದೆ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಜನ

ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರವೂ ಜನಸಾಗರ ಹರಿದುಬಂದಿದೆ. ಬಂದ್‌ ನಡುವೆಯೂ 16 ಸಾವಿರಕ್ಕೂ ಅಧಿಕ ಪುಷ್ಪಪ್ರಿಯರು ಭೇಟಿ ನೀಡಿದ್ದರು.

‘ಒಟ್ಟು ₹7.6 ಲಕ್ಷ ಹಣ ಸಂಗ್ರಹವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ಶಾಲೆಗಳಿಂದ ಮಕ್ಕಳು ಬಂದಿರಲಿಲ್ಲ. ಹಾಗಾಗಿ ಈ ಹಿಂದಿನ ದಿನಗಳಿಗಿಂತ ಜನಸಂಖ್ಯೆ ಕಡಿಮೆಯಾಗಿದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಬಂದ್‌ನಿಂದಾಗಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಹೆಚ್ಚು ಜನ ಬರುವ ನಿರೀಕ್ಷೆಯಿರಲಿಲ್ಲ. ಹೀಗಿದ್ದೂ, ಸಾಕಷ್ಟು ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry