ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಥೆಗಳು ಶಿಸ್ತು, ಮಿತಿ ಅರಿತಿರಬೇಕು: ರಾಮನಾಥ ಕೋವಿಂದ್‌

Last Updated 25 ಜನವರಿ 2018, 19:44 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ತಮ್ಮ ಮೊದಲ ಗಣರಾಜ್ಯೋತ್ಸವ ಭಾಷಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಇತ್ತೀಚೆಗೆ ಉಂಟಾಗಿದ್ದ ನ್ಯಾಯಾಂಗ ಬಿಕ್ಕಟ್ಟನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

‘ಶಿಸ್ತುಬದ್ಧ ಮತ್ತು ನೈತಿಕವಾಗಿ ಪ್ರಾಮಾಣಿಕವಾದ ಸಂಸ್ಥೆಗಳು ಶಿಸ್ತುಬದ್ಧ ಮತ್ತು ನೈತಿಕವಾಗಿ ಪ್ರಾಮಾಣಿಕ ರಾಷ್ಟ್ರವನ್ನು ನಿರ್ಮಾಣ ಮಾಡುತ್ತವೆ’ ಎಂಬುದನ್ನು ಎಲ್ಲರಿಗೂ ನೆನಪಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಕೋವಿಂದ್‌, ‘ಈ ಸಂಸ್ಥೆಗಳು ಇತರ ಸಂಸ್ಥೆಗಳೊಂದಿಗೆ ಹೊಂದಿ
ರುವ ಸೋದರ ಸಂಬಂಧಕ್ಕೆ ಗೌರವ ನೀಡಬೇಕು. ಅಲ್ಲದೇ, ಶ್ರೇಷ್ಠತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಪ್ರಾಮಾಣಿಕತೆ, ಶಿಸ್ತು ಮತ್ತು ಕಾರ್ಯನಿರ್ವಹಣೆಯ ಮಿತಿಯನ್ನು ಅರಿತುಕೊಂಡಿರಬೇಕು’ ಎಂದು ಪ್ರತಿಪಾದಿಸಿದ್ದಾರೆ.

‘ಯಾವತ್ತೂ ವ್ಯಕ್ತಿಗಳಿಗಿಂತ ಸಂಸ್ಥೆಗಳೇ ಮುಖ್ಯ. ಅದರ ಪಾಲುದಾರರು ಮತ್ತು ಸದಸ್ಯರು ಜನರ ಆಡಳಿತಗಾರರಾಗಿ ತಮ್ಮ ಅಧಿಕಾರವನ್ನು ಅವರ ನಿರೀಕ್ಷೆಗೆ ತಕ್ಕಂತೆ ಚಲಾಯಿಸಲು ಯತ್ನಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ನಡೆದಿರುವ ಧರ್ಮ ದ್ವೇಷದ ಪ್ರಕರಣಗಳು ಮತ್ತು ‘ಪದ್ಮಾವತ್‌’ ಚಿತ್ರ ವಿವಾದವನ್ನೂ ಕೋವಿಂದ್‌ ಭಾಷಣದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

‘ನಾಗರಿಕ ಮನಸ್ಥಿತಿಯ ಜನರೆಲ್ಲ ಸೇರಿ ನಾಗರಿಕ ಮನಸ್ಥಿತಿಯ ದೇಶ ನಿರ್ಮಿಸುತ್ತಾರೆ. ನಗರ ಅಥವಾ ಗ್ರಾಮಗಳಿಗೂ ಇದು ಅನ್ವಯವಾಗುತ್ತದೆ. ಅಲ್ಲಿ ನಮ್ಮ ಪಕ್ಕದ ಮನೆಯವನ ಜಾಗ, ಅವನ ಖಾಸಗಿತನ ಮತ್ತು ಹಕ್ಕುಗಳನ್ನು ನಾವು ಗೌರವಿಸುತ್ತೇವೆ. ಯಾವುದೇ ಹಬ್ಬವನ್ನು ಸಂಭ್ರಮಿಸುವಾಗ, ಪ್ರತಿಭಟನೆ ನಡೆಸುವಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ  ನೆರೆಯವರಿಗೆ ಅನನುಕೂಲ ಮಾಡುವುದಿಲ್ಲ.ಅಲ್ಲಿ ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಒಪ್ಪದಿರಬಹುದು ಅಥವಾ ಐತಿಹಾಸಿಕ ವಿಚಾರದಲ್ಲೂ ಭಿನ್ನ ನಿಲುವು ಇರಬಹುದು. ಆದರೆ ಯಾವತ್ತೂ ತನ್ನ ಸಹ ದೇಶವಾಸಿಯ ಘನತೆ ಮತ್ತು ಖಾಸಗಿತನವನ್ನುವ್ಯಂಗ್ಯವಾಡುವುದಿಲ್ಲ. ಇದುವೇ ನಿಜವಾದ ಭ್ರಾತೃತ್ವ’ ಎಂದು ಹೇಳಿದ್ದಾರೆ.

‘ಹೆಣ್ಣುಮಕ್ಕಳ ಮೊರೆಗೆ ಕಿವಿ ಮುಚ್ಚದಿರಿ’

ಬಡವರು, ಹೆಣ್ಣು ಮಕ್ಕಳು ಮತ್ತು ಇನ್ನೂ ಮೂಲಸೌಲಭ್ಯಗಳಿಂದ ವಂಚಿತರಾದರವನ್ನು ಶೀಘ್ರವಾಗಿ ಉದ್ಧಾರ ಮಾಡಬೇಕು ಎಂದು ಕೋವಿಂದ್‌ ಹೇಳಿದ್ದಾರೆ.

‘ಖುಷಿಯಿಂದಿರುವ ಹಾಗೂ ಸಮಾನ ಅವಕಾಶ ಹೊಂದಿರುವ ಕುಟುಂಬ ಹಾಗೂ ಸಮುದಾಯಗಳಿಂದ ಮಾತ್ರ ಸಂತೋಷ ಮತ್ತು ಸಮಾನ ಅವಕಾಶ ಇರುವ ರಾಷ್ಟ್ರ ನಿರ್ಮಾಣ ಸಾಧ್ಯ. ಕುಟುಂಬಗಳಲ್ಲಿ ಗಂಡು ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಹೆಣ್ಣು ಮಕ್ಕಳಿಗೂ ದೊರೆಯಬೇಕು’ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಸರ್ಕಾರಗಳುನೀತಿ ಮತ್ತು ಕಾನೂನುಗಳನ್ನು ಜಾರಿಗೆ ತರಬಹುದು. ಆದರೆ, ಕುಟುಂಬಗಳು ಮತ್ತು ಸಮುದಾಯಗಳಿಂದ ಮಾತ್ರ ಅವುಗಳನ್ನು ಪರಿಣಾಮಕಾರಿಯಾಗಿಸಬಹುದು. ಕುಟುಂಬ ಮತ್ತು ಸಮುದಾಯಗಳು ನಮ್ಮ ಪುತ್ರಿಯರ ಕೂಗನ್ನು ಆಲಿಸಬೇಕು. ಬದಲಾವಣೆಗಾಗಿ ಅವರು ಮೊರೆ ಇಡುತ್ತಿರುವಾಗನಾವು ಕಿವಿಗಳನ್ನು ಮುಚ್ಚಿರಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT