ಸ್ನೂಕರ್‌: ಹಿಮಾಂಶು ಜೈನ್‌ ಕ್ವಾರ್ಟರ್‌ಗೆ

7

ಸ್ನೂಕರ್‌: ಹಿಮಾಂಶು ಜೈನ್‌ ಕ್ವಾರ್ಟರ್‌ಗೆ

Published:
Updated:
ಸ್ನೂಕರ್‌: ಹಿಮಾಂಶು ಜೈನ್‌ ಕ್ವಾರ್ಟರ್‌ಗೆ

ಬೆಂಗಳೂರು: ತೆಲಂಗಾಣದ ಹಿಮಾಂಶು ಜೈನ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್ ಹಂತಕ್ಕೆ ಲಗ್ಗೆ ಇರಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಅವರು ತೆಲಂಗಾಣದವರೇ ಆದ ಲಕ್ಕಿ ವಟ್ನಾನಿ ಅವರನ್ನು 4–0ಯಿಂದ (70–28, 70–57, 50–45, 61–20) ಮಣಿಸಿದರು.

ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಹಿಮಾಂಶು ಮೊದಲ ಫ್ರೇಮ್‌ನಲ್ಲಿ ಭಾರಿ ಮುನ್ನಡೆ ಗಳಿಸಿ ಮಿಂಚಿದರು. ಮುಂದಿನ ಫ್ರೇಮ್‌ನಲ್ಲೂ ಭರ್ಜರಿ ಆಟವಾಡಿ ಮುನ್ನಡೆ ಹೆಚ್ಚಿಸಿಕೊಂಡರು. ಮೂರನೇ ಫ್ರೇಮ್‌ನಲ್ಲಿ ಲಕ್ಕಿ ತಿರುಗೇಟು ನೀಡಲು ಶ್ರಮಿಸಿದರು.

ಒಂದು ಹಂತದ ವರೆಗೆ ಇದರಲ್ಲಿ ಅವರು ಯಶಸ್ವಿಯಾದರು. ಆದರೆ ಅಂತಿಮವಾಗಿ ಹಿಮಾಂಶು 50–45ರಲ್ಲಿ ಗೆದ್ದರು. ನಿರ್ಣಾಯಕ ನಾಲ್ಕನೇ ಫ್ರೇಮ್‌ನಲ್ಲಿ ಸುಲಭ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry