ಅಪಘಾತ: ತಂದೆ ಸಾವು, ಮಗಳಿಗೆ ಗಾಯ

7

ಅಪಘಾತ: ತಂದೆ ಸಾವು, ಮಗಳಿಗೆ ಗಾಯ

Published:
Updated:

ಬೆಂಗಳೂರು: ಕೂಡ್ಲುಗೇಟ್ ಬಳಿ ಬುಧವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ಯಾವುದೋ ವಾಹನ ಗುದ್ದಿ ಮಾಜಿ ಸೈನಿಕ ಸುಬ್ರಹ್ಮಣ್ಯ (51) ‌ಮೃತಪಟ್ಟು, ಅವರ ಮಗಳು ಅಖಿಲಾ (24) ಗಾಯಗೊಂಡಿದ್ದಾರೆ.

ಚಿಕ್ಕಬೇಗೂರಿನ ‘ಲಕ್ಷ್ಮಿ ವೆಂಕಟೇಶ್ವರ’ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ತಂದೆ–ಮಗಳು, ಸಿನಿಮಾ ವೀಕ್ಷಿಸಲು ರಾತ್ರಿ ಮನೆ ಸಮೀಪದ ‘ನರಸಿಂಹ’ ಚಿತ್ರಮಂದಿರಕ್ಕೆ ಹೋಗಿದ್ದರು. ಅಲ್ಲಿಂದ 12.45ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ.

ಗಾಯಗೊಂಡ ತಂದೆ–ಮಗಳನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಸುಬ್ರಹ್ಮಣ್ಯ ‌ಕೊನೆಯುಸಿರೆಳೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry