ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ಭಾಷಣದಲ್ಲಿ ಹೊಸತೇನು ಇಲ್ಲ, ಬಂದಾಗಲೆಲ್ಲ ಹೇಳಿದ ಸುಳ್ಳುಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ

Last Updated 26 ಜನವರಿ 2018, 13:00 IST
ಅಕ್ಷರ ಗಾತ್ರ

ಬೆಂಗಳೂರು: ಅಮಿತ್ ಶಾ ಹುಲಿ, ಮೋದಿ ಸಿಂಹ ಎಂಬ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ಯೋಜನೆ ಜಾರಿಯಲ್ಲಿದೆ. ಬನ್ನೇರುಘಟ್ಟ, ನಾಗರಹೊಳೆ, ದಾಂಡೇಲಿಯಲ್ಲಿ ಸಾಕಷ್ಟು ‌ಕಾಡಿದೆ ಎಲ್ಲಿಬೇಕಾದರೂ ಓಡಾಡಲಿ.

ಅಮಿತ್ ಶಾ ಭಾಷಣದಲ್ಲಿ ಹೊಸತೇನು ಇಲ್ಲ. ಬಂದಾಗಲೆಲ್ಲ ಹೇಳಿದ ಸುಳ್ಳುಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಬರುವ ಬದಲು ಹಳೇ ಆಡಿಯೋ ಪ್ಲೇ ಮಾಡಿದ್ದರೆ ಸಾಕಿತ್ತು ಎಂದು ದಿನೇಶ್ ಗುಂಡೂರಾವ್ ಕೆಪಿಸಿಸಿ ಕಚೇರಿ ಬಳಿ ಧ್ವಜಾರೋಹಣದ ಬಳಿಕ ಹೇಳಿಕೆ ನೀಡಿದ್ದಾರೆ.

ಗುರುವಾರ ಮೈಸೂರಿನಲ್ಲಿ ಕೊನೆಗೊಂಡ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮುಗಿಸಿ ನಿರ್ಗಮಿಸಿದ ನಂತರ ಮಾತನಾಡಿದ ಈಶ್ವರಪ್ಪ, ಈಗ ಹುಲಿ (ಶಾ) ಘರ್ಜಿಸಿ ಹೋಯಿತು. ಫೆ.4ಕ್ಕೆ ಸಿಂಹ (ಮೋದಿ) ಬರುತ್ತದೆ, ಪರಿಣಾಮ ಸಿದ್ದರಾಮಯ್ಯ ಇಲಿ ಆಗುತ್ತಾರೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT