ಕೇಂದ್ರದ ಅನುದಾನ ಖರ್ಚಾಗಿರುವ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು?

7

ಕೇಂದ್ರದ ಅನುದಾನ ಖರ್ಚಾಗಿರುವ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು?

Published:
Updated:
ಕೇಂದ್ರದ ಅನುದಾನ ಖರ್ಚಾಗಿರುವ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು?

ಬೆಂಗಳೂರು: ಹುಲಿ, ಸಿಂಹ, ಕಿರುಬಗಳನ್ನು ಸಾಕಷ್ಟು ನೋಡಿದ್ದೇವೆ. ಯಾರು ಸಿಂಹ ಆಗಬೇಕು ಎಂಬುದನ್ನು 2018ರ ಚುನಾವಣೆಯಲ್ಲಿ ಜನ ತೀರ್ಮಾನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದ್ದಾರೆ.

ಕೆಪಿಸಿಸಿ ಕಚೇರಿ ಬಳಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ಕೇಂದ್ರದ ಅನುದಾನ ಖರ್ಚಾಗಿರುವ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು? ಬಿಜೆಪಿ ಅಧ್ಯಕ್ಷರಿಗೆ ಲೆಕ್ಕ ಕೊಡಬೇಕೆ? ನಮ್ಮ ಪಾಲಿನ ಅನುದಾನವನ್ನಷ್ಟೇ ಕೇಂದ್ರ ಸರ್ಕಾರ ಕೊಟ್ಟಿದೆ ಹೊಸದಾಗಿ ಏನು ಕೊಡುಗೆ ನೀಡಿದೆ?

ರಾಜ್ಯದ ಸಚಿವರ ಹಗರಣಗಳ ದಾಖಲೆಗಳು ದೆಹಲಿಗೆ ತಲುಪಿ ಪ್ರಯೋಜನ ಏನು? ರಾಜ್ಯದ ಜನರ ಮುಂದಿಡಲಿ. ಮುಖ್ಯಮಂತ್ರಿಯೇ ಹಲವಾರು ಬಾರಿ ಬಹಿರಂಗ ಚರ್ಚೆಗೆ ಕರೆದಿದ್ದಾರೆ. ದಾಖಲೆಗಳಿದ್ದರೆ ಬನ್ನಿ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry