ಜಮೀನು ವಶಕ್ಕೆ ಒತ್ತಾಯಿಸಿ ಪ್ರತಿಭಟನೆ

7

ಜಮೀನು ವಶಕ್ಕೆ ಒತ್ತಾಯಿಸಿ ಪ್ರತಿಭಟನೆ

Published:
Updated:
ಜಮೀನು ವಶಕ್ಕೆ ಒತ್ತಾಯಿಸಿ ಪ್ರತಿಭಟನೆ

ಲೋಕಾಪುರ: ಸರ್ಕಾರಿ ಜಮೀನು ವಶಕ್ಕೆ ಪಡೆಯಲು ಒತ್ತಾಯಿಸಿ ಜಾಲಿಕಟ್ಟಿ ಗ್ರಾಮದ ವಸಂತಗೌಡ ಪಾಟೀಲ ಎಂಬುವರು ನಾಡಕಚೇರಿ ಹತ್ತಿರ ಗುರುವಾರ ಧರಣಿ ಆರಂಭಿಸಿದರು.

ಲೋಕಾಪುರ ಪಟ್ಟಣದ ಸರ್ವೆ ನಂಬರ 125 ಮತ್ತು 127ರಲ್ಲಿ ಒತ್ತುವರಿಯಾಗಿರುವ ಜಮೀನನ್ನು ಸರ್ಕಾರವು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಜಾಲಿಕಟ್ಟಿ ಕೆ.ಡಿ, ಜನತಾ ಪ್ಲಾಟ್ ಆಸ್ತಿಗಳ ಉತಾರ ನೀಡಬೇಕು. ಆಗ ಗ್ರಾಮಸ್ಥರಿಗೆ ನ್ಯಾಯ ಸಿಗುತ್ತದೆ ವಸಂತಗೌಡ ಪಾಟೀಲ ತಿಳಿಸಿದರು. ಈ ಕುರಿತು ಗಮನ ಹರಿಸಲಾಗುವುದು ಎಂದು ತಹಶೀಲ್ದಾರ್‌ ಡಿ.ಜಿ ಮಹಾತ ಹೇಳಿದರು.

ಪ್ರಮುಖರಾದ ಹಣಮಂತಗೌಡ ಪಾಟೀಲ, ಭೀಮನಗೌಡ ಪಾಟೀಲ, ನಿಂಗನಗೌಡ ಪಾಟೀಲ, ರಾಮಣ್ಣ ಸಂಶಿ, ಬಾಲಕೃಷ್ಣ ರಡ್ಡಿ , ವಿಠ್ಠಲಗೌಡ ಪಾಟೀಲ , ರಾಘವೇಂದ್ರ ಪಾಟೀಲ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry