ಮಹದಾಯಿಗೆ ಆಗ್ರಹ; ತೆಲಸಂಗದಲ್ಲಿ ರಸ್ತೆ ತಡೆ

7

ಮಹದಾಯಿಗೆ ಆಗ್ರಹ; ತೆಲಸಂಗದಲ್ಲಿ ರಸ್ತೆ ತಡೆ

Published:
Updated:

ತೆಲಸಂಗ: ಮಹದಾಯಿ ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿ, ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸಬೇಕೆಂದು ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಯುಸೂಫ್ ಮುಜಾವರ ಒತ್ತಾಯಿಸಿದರು.

ಕಳಸಾ ಬಂಡೂರಿ ನಾಲಾ ಯೋಜನೆ, ಮಹದಾಯಿ ನದಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದಗೆ ಬೆಂಬಲಿಸಿ ಕರವೇ ಕಾರ್ಯಕರ್ತರು ತೆಲಸಂಗ ಗ್ರಾಮದ ಅಥಣಿ– ವಿಜಯಪುರ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗುವುದನ್ನು ಬಿಟ್ಟು, ಮಹದಾಯಿ ನೀರು ತರುವಬಗ್ಗೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅನಿಲ ಪಾಂಗಿ, ಅಶೋಕ ಉಂಡೋಡಿ, ರಾಜು ಪರ್ನಾಕರ, ರಾಜು ಕಾರಂಡೆ, ಸುಭಾಸ್ ಖೊಬ್ರಿ, ರಾಜು ಹೊನಕಾಂಬಳೆ, ರಾಜು ಸಾಗರ, ಸುನೀಲ ಮಾದರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry