‘ಜವಾಬ್ದಾರಿ ಅರಿತು ಮತ ಹಾಕಿ’

7

‘ಜವಾಬ್ದಾರಿ ಅರಿತು ಮತ ಹಾಕಿ’

Published:
Updated:
‘ಜವಾಬ್ದಾರಿ ಅರಿತು ಮತ ಹಾಕಿ’

ಸಿರುಗುಪ್ಪ: ‘ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಮತ ನೀಡುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಅದನ್ನು ಅರಿತುಕೊಂಡು ಮತ ಚಲಾವಣೆ ಮಾಡಬೇಕು’ ಎಂದು ತಹಶೀಲ್ದಾರ್‌ ಎಂ.ಸುನೀತಾ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಶಾಲೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಮಾತನಾಡಿ, ‘ಮತದಾರರು ಆಮಿಷಗಳಿಗೆ ಒಳಗಾಗಬಾರದು. ಉತ್ತಮ ಜನಪ್ರತಿನಿಧಿಗಳ ಆಯ್ಕೆಗೆ ಹೆಚ್ಚಿನ ಪ್ರಾಸಶ್ತ್ಯ ನೀಡಬೇಕು’ ಎಂದರು. ಪ್ರಾಚಾರ್ಯ ವೀರೇಶಪ್ಪ ಮಾತನಾಡಿದರು.

ಇದೇ ವೇಳೆಯಲ್ಲಿಹೊಸದಾಗಿ ಹೆಸರು ಸೇರ್ಪಡೆಗೊಳಿಸಿದವರಿಗೆ‌ ತಹಶೀಲ್ದಾರ್ ಸುನೀತಾ ಚುನಾವಣಾ ಗುರುತಿನ ಚೀಟಿ ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ಪೌರಾಯುಕ್ತ ಮರಿಲಿಂಗಪ್ಪ, ಶಿರಸ್ತೇದಾರ್ ಶಶಿಕಾಂತ್ ವೀರಾಪೂರ್, ಕಂದಾಯ ನಿರೀಕ್ಷಕ ಮೊಹಮ್ಮದ್ ಸಾಧಿಕ್, ಚುನಾವಣಾ ಸಿಬ್ಬಂದಿ ರೇವಣಾರಾಧ್ಯ, ನಗರಸಭೆಯ ಬಸವರಾಜ್, ಉಪನ್ಯಾಸ ಯರ‍್ರೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry