ಜಾತ್ರೆಗೆ ವಿಶೇಷ ಬಸ್‌ ಸೌಲಭ್ಯ, ಸಹಾಯವಾಣಿ

7

ಜಾತ್ರೆಗೆ ವಿಶೇಷ ಬಸ್‌ ಸೌಲಭ್ಯ, ಸಹಾಯವಾಣಿ

Published:
Updated:

ಹುಮನಾಬಾದ್‌: ಭಕ್ತರಿಗಾಗಿ ತಾಲ್ಲೂಕು ಆಡಳಿತದಿಂದ ಕುಡಿಯುವ ನೀರು, ಸಂಚಾರಿ ಶೌಚಾಲಯ, ಆರೋಗ್ಯ ತಪಾಸಣೆ ತುರ್ತು ಸೇವಾ ಘಟಕ ಆರಂಭಿಸಲಾಗಿದೆ.

ಜೊತೆಗೆ ಜಾತ್ರೆಯಲ್ಲಿ ಯಾವುದೇ ರೀತಿ ಅಪರಾಧ ಕೃತ್ಯ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ಈಗಾಗಲೇ ಮುಂಜಾಗೃತಾ ಕ್ರಮ ಕೈಗೊಂಡಿದೆ. ಯಾತ್ರಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆದಲ್ಲಿ ಹುಮನಾಬಾದ್‌ ಇನ್‌ಸ್ಪೆಕ್ಟರ್‌ ಜಿ.ಎಸ್‌.ನ್ಯಾಮಗೌಡರ್‌–94808 03435, ಸಬ್‌ ಇನ್‌ಸ್ಪೆಕ್ಟರ್‌ ಎಲ್.ಟಿ.ಸಂತೋಷ–9480803452 ಅವರನ್ನು ಸಂಪರ್ಕಿಸಬಹುದು.

ವೀರಭದ್ರೇಶ್ವರ ಜಾತ್ರೆ ನಿಮಿತ್ತ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಗೆ ಹೆಚ್ಚುವರಿಯಾಗಿ 15 ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯ ಔರಾದ್‌, ಭಾಲ್ಕಿ, ಬಸವಕಲ್ಯಾಣ, ಜಿಲ್ಲಾ ಕೇಂದ್ರದಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry