ಹೊಸ ಮಾರ್ಗದಲ್ಲಿ ಬಸ್ ಸಂಚಾರ

7

ಹೊಸ ಮಾರ್ಗದಲ್ಲಿ ಬಸ್ ಸಂಚಾರ

Published:
Updated:

ಬೆಳವಣಿಕಿ (ರೋಣ ತಾ.): ಗದಗ–ಹೊಳೆಆಲೂರ, ಗದಗ–ನರಗುಂದ ಹೊಸ ಮಾರ್ಗದಲ್ಲಿ ಗುರುವಾರ ಸರ್ಕಾರಿ ಬಸ್‌ ಸಂಚಾರ ಪ್ರಾರಂಭವಾಯಿತು.

7 ದಶಕಗಳ ನಂತರ ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸಂಚಾರಕ್ಕೆ ಮುಕ್ತವಾಗಿರುವ ಈ ಮಾರ್ಗದಲ್ಲಿ ಗದಗದಿಂದ ಹುಯಿಲಗೋಳ, ಕದಡಿ, ಗಾರವಾಡ, ಬಳಗಾನೂರ, ಬೆಳವಣಿಕಿ ಮೂಲಕ ಹೊಳೆ-ಆಲೂರಿಗೆಹಾಗೂ ಗದಗದಿಂದ ಹುಯಿಲಗೋಳ, ಬಳಗಾನೂರು, ಬೆಳವಣಿಕಿ, ಯಾವಗಲ್ ಮಾರ್ಗವಾಗಿ ನರಗುಂದಕ್ಕೆ ಪ್ರತಿದಿನ ಎರಡು ಬಸ್‌ಗಳು ಸಂಚರಿಸುತ್ತವೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಪ್ಪ ತಾಳಿ ಹೇಳಿದರು.

ಗ್ರಾಮ ಪಂಚಾಯ್ತಿ ಸದಸ್ಯ ಶಿವಪ್ಪ ಹಾಲಬಾವಿ, ಅಯ್ಯನಗೌಡ್ರ ಪಾಟೀಲ, ರಾಮಣ್ಣ ನಾಯ್ಕರ, ದೊಡ್ಡಪ್ಪ ಅಂಗಡಿ, ಮಲ್ಲಪ್ಪ ಅಂಗಡಿ, ಕಮಪ್ಪ ಕುರಿ, ಪ್ರಕಾಶ ಕರ್ಕಿಕಟ್ಟಿ, ಶೇಖರಗೌಡ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry