ಕೈಗಾರಿಕಾ ಇಲಾಖೆ: ಬೆಂಕಿ ಹೊತ್ತಿಕೊಂಡು ಕಡತ ಭಸ್ಮ

7

ಕೈಗಾರಿಕಾ ಇಲಾಖೆ: ಬೆಂಕಿ ಹೊತ್ತಿಕೊಂಡು ಕಡತ ಭಸ್ಮ

Published:
Updated:

ಉಡುಪಿ: ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇ ಶಕರ ಕಚೇರಿಯ ಕಡತ ಸಂಗ್ರಹ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಾಖಲೆಗಳು ಸುಟ್ಟು ಹೋಗಿವೆ.

ಕಚೇರಿಯ ಮೊದಲ ಮಹಡಿಯಲ್ಲಿ ಹಳೆಯ ಕಡತಗಳನ್ನು ಜೋಡಿಸಿಡಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿಯಿಂದ ಹೊರೆ ಬರುತ್ತಿದ್ದದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆದರೆ ಹಲವಾರು ಕಡತಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.

ಹೈವೋಲ್ಟೇಜಿನ ಪರಿಣಾಮ ಶಾರ್ಟ್‌ ಸರ್ಕಿಟ್ ಆಗಿರುವ ಸಾಧ್ಯತೆ ಇದೆ. ಕಚೇರಿ ಪಕ್ಕದಲ್ಲಿರುವ ಎರಡು ಕಚೇರಿಗಳಲ್ಲಿ ಬುಧವಾರ ಹೈವೋಲ್ಟೇಜಿನ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry