ಕಾರ್ಕಳ: ಅತ್ತೂರು ಸಾಂತಮಾರಿ ಹಬ್ಬಕ್ಕೆ ತೆರೆ

7
ಪೂಜೆಯ ಸಂದರ್ಭ ಭಕ್ತಾದಿಗಳಿಂದ ತುಂಬಿದ್ದ ಚರ್ಚ್‌

ಕಾರ್ಕಳ: ಅತ್ತೂರು ಸಾಂತಮಾರಿ ಹಬ್ಬಕ್ಕೆ ತೆರೆ

Published:
Updated:
ಕಾರ್ಕಳ: ಅತ್ತೂರು ಸಾಂತಮಾರಿ ಹಬ್ಬಕ್ಕೆ ತೆರೆ

ಕಾರ್ಕಳ: ‘ಬಡವರಿಗೆ ಮೂಲ ಅವಶ್ಯಕತೆಗಳನ್ನು ಒದಗಿಸಲು ಪಣತೊಡೋಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ.ಡಾ. ಜೆರಾಲ್ಡ್ ಲೋಬೊ ತಿಳಿಸಿದರು.

ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬೆಸಿಲಿಕಾದ ವಾರ್ಷಿಕ ಮಹೋತ್ಸವದ ಐದನೇ ದಿನ ಗುರು ವಾರ ಅಂತಿಮ ದಿನದ ವಿಶೇಷ ದಿವ್ಯ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವ ಚನ ನೀಡಿದರು.

‘ನಾವು ವಿವಿಧ ಕ್ಷೇತ್ರಗಳಲ್ಲಿ ಅಚ್ಚರಿಪಡುವಂತಹ ಸಾಧನೆಗಳನ್ನು ಮಾಡಿದ್ದೇವೆ. ಆದರೂ ಮನುಷ್ಯನ ಮೂಲ ಅವಶ್ಯಕತೆಗಳಾದ ಆಹಾರ, ಬಟ್ಟೆ ಹಾಗೂ ವಸತಿಯನ್ನು ಪೂರೈಸಲು ಶಕ್ತರಾಗಿಲ್ಲ. ಎಲ್ಲರಿಗೂ ಮೂಲ ಅಗತ್ಯಗಳನ್ನು ಒದಗಿಸಲು ನಾಗರಿಕ ಸಮಾಜ ಪಣತೊಡಬೇಕು’ ಎಂದರು.

ಒಟ್ಟು 10 ಪೂಜೆಗಳಲ್ಲಿ ಮೂರು ಪೂಜೆಗಳು ಕನ್ನಡ ಭಾಷೆಯಲ್ಲಿ ನೆರವೇ ರಿದವು. ಭಕ್ತಾದಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಮಂಗಳೂರಿನ ಸೇಂಟ್ ಜೊಸೆಫ್ ಸೆಮಿನರಿಯ ರೆಕ್ಟರ್ ಜೊಸೆಫ್ ಮಾರ್ಟಿಸ್ ಹಾಗೂ ಇನ್ನಿತರ ಗುರುಗಳು ಬಲಿಪೂಜೆ ನೆರವೇರಿಸಿ ಆಶೀರ್ವಚಿಸಿದರು. ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಲೋಬೊ ಮಾರ್ಗದರ್ಶಿ ಮಾತೆ ಮರಿಯಮ್ಮನವರ ಹಬ್ಬದ ದಿನದ ಪ್ರಯುಕ್ತ ಪ್ರಮುಖ ಪೂಜೆಯನ್ನು ಅರ್ಪಿಸಿದರು. ಈ ಪೂಜೆಯ ಸಂದರ್ಭ ಚರ್ಚ್ ಭಕ್ತಾದಿಗಳಿಂದ ತುಂಬಿತ್ತು.

ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಗೋಪಾಲ ಭಂಡಾರಿ ಕ್ಷೇತ್ರಕ್ಕೆ ಭೇಟಿಯಿತ್ತು ಪ್ರಾರ್ಥನೆ ಸಲ್ಲಸಿದರು. ಬೆಸಿಲಿಕಾದ ರೆ.ಫಾ. ಜಾರ್ಜ್ ಡಿಸೋಜ, ಜೆನ್ಸಿಲ್ ಆಳ್ವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry