‘ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪ’

7

‘ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪ’

Published:
Updated:
‘ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪ’

ಅಕ್ಕಿಆಲೂರ: ‘ಯುವಶಕ್ತಿಯನ್ನು ಬಡಿದೆಬ್ಬಿಸಿದ ವೀರ ಸೇನಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಹೆಸರಿನಲ್ಲಿಯೇ ರೋಮಾಂಚನವಿದೆ. ದೇಶಭಕ್ತಿಯ ಪ್ರತೀಕವಾಗಿರುವ ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ’ ಎಂದು ಇಲ್ಲಿಯ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಕೃಷ್ಣ ಈಳಿಗೇರ ಹೇಳಿದರು.

ಇಲ್ಲಿಯ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನಡೆದ ನೇತಾಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೇತಾಜಿ ಅವರ ಹುಮ್ಮಸ್ಸು, ಸ್ವಾತಂತ್ರ್ಯಕ್ಕಾಗಿ ಇದ್ದ ತುಡಿತದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದವೆ. ಅವರಿಗೆ ಪ್ರತಿಯೊಬ್ಬ ಭಾರತೀಯರು ನಮಿಸಬೇಕು’ ಎಂದು ಸಲಹೆ ನೀಡಿದರು.

ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶಿವಯೋಗಿ ಪಾಟೀಲ ಮಾತನಾಡಿದರು.

ಬ್ಯಾಂಕ್‌ನ ನಿರ್ದೇಶಕ ವಿಶ್ವನಾಥ ಭಿಕ್ಷಾವರ್ತಿಮಠ, ಸಿಇಒ ಶಂಭು ಹಿರೇಮಠ, ಗಿರೀಶ ಕರಿದ್ಯಾವಣ್ಣನವರ, ನವೀನ ಭಿಕ್ಷಾವರ್ತಿಮಠ, ವಿಶ್ವನಾಥ ಚಿಕ್ಕಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry