ಮತದಾರರ ಪಟ್ಟಿಗೆ ಹೆಸರು ಸೇರಿಸಿ

7

ಮತದಾರರ ಪಟ್ಟಿಗೆ ಹೆಸರು ಸೇರಿಸಿ

Published:
Updated:

ವಿರಾಜಪೇಟೆ: ಅರ್ಹ ಮತದಾರರು ಮತದಾನದಿಂದ ಹೊರಗುಳಿಯದೇ ಮತದಾರರ ಪಟ್ಟಿಗೆ ಕಡ್ಡಾಯವಾಗಿ ಹೆಸರು ಸೇರಿಸಬೇಕು ಎಂದು ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಕರೆ ನೀಡಿದರು.

ಚುನಾವಣಾ ಆಯೋಗ, ತಾಲ್ಲೂಕು ಆಡಳಿತ ಹಾಗೂ ಕಾನೂನು ಸೇವೆಗಳ ಸಮಿತಿಯಿಂದ ‘ರಾಷ್ಟ್ರೀಯ ಮತದಾರರ ದಿನ’ದ ಅಂಗವಾಗಿ ಗುರುವಾರ ಇಲ್ಲಿನ ಪುರಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ಪ್ರಜ್ಞಾವಂತ ಮತದಾರರಿಂದ ಮತ ಚಲಾವಣೆಯಾದರೆ ಮಾತ್ರ ದೇಶದ ಪ್ರಗತಿ–ಅಭಿವೃದ್ಧಿ ಸಾಧ್ಯ. ಯುವಶಕ್ತಿ ಮತ ಚಲಾವಣೆ ಮೂಲಕ ಕೈ ಜೋಡಿಸಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್, ಸಿಪಿಐ ಕುಮಾರ್ ಆರಾಧ್ಯ, ವಕೀಲ ಪವಾಜ್, ಪ್ರೋಬೆಷನರಿ ತಹಶೀಲ್ದಾರ್ ತ್ರಿನೇತ್ರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಆರ್.ಗೋವಿಂದರಾಜ್ ಅವರು ನೂತನವಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಮತ ದಾರರ ಪಟ್ಟಿಗೆ ನೂತನವಾಗಿ ಸೇರ್ಪಡೆಯಾದವರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಶಿರಸ್ತೇದಾರ್ ಕೆ.ಎಂ.ಚಿಣ್ಣಪ್ಪ, ಪ್ರವೀಣ್‌ಕುಮಾರ್, ಮತದಾರರ ನೋಂದಣಿಯ ಉಸ್ತುವಾರಿ ಸಿಬ್ಬಂದಿ ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry