ಚೀನಾ, ಇಂಡೋನೇಷ್ಯಾ, ಸಿಂಗಪುರದಲ್ಲಿ ಗಣರಾಜ್ಯೋತ್ಸವ ಆಚರಣೆ

7

ಚೀನಾ, ಇಂಡೋನೇಷ್ಯಾ, ಸಿಂಗಪುರದಲ್ಲಿ ಗಣರಾಜ್ಯೋತ್ಸವ ಆಚರಣೆ

Published:
Updated:
ಚೀನಾ, ಇಂಡೋನೇಷ್ಯಾ, ಸಿಂಗಪುರದಲ್ಲಿ ಗಣರಾಜ್ಯೋತ್ಸವ ಆಚರಣೆ

ಬೀಜಿಂಗ್‌/ಸಿಂಗಪುರ: ವಿದೇಶಗಳಲ್ಲಿರುವ ಭಾರತೀಯರು ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ 69 ನೇ ಗಣರಾಜ್ಯೋತ್ಸವ ಆಚರಿಸಿದರು.

ಚೀನಾದ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಾಯಭಾರಿ ಗೌತಮ್‌ ಬಂಬವಾಲೆ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಭಾಷಣವನ್ನು ಓದಿದರು.

ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ 300ಕ್ಕಿಂತಲೂ ಹೆಚ್ಚು ಮಂದಿ ಭಾರತೀಯರು ಪಾಲ್ಗೊಂಡಿದ್ದರು.

ಇಂಡೋನೇಷ್ಯಾದ ಜಕಾರ್ತದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲೂ ಗಣರಾಜ್ಯೋತ್ಸವ ಆಚರಿಸಲಾಯಿತು. ರಾಯಭಾರ ಕಚೇರಿಯ ಅಧಿಕಾರಿ ಪ್ರಕಾಶ್‌ ಗುಪ್ತಾ ಧ್ವಜಾರೋಹಣ ನೆರವೇರಿಸಿದರು. ಬಾಲಿ, ಮತ್ತು ಮೆದನ್‌ನಲ್ಲಿರುವ ಕಾನ್ಸುಲೇಟ್‌ ಕಚೇರಿಗಳಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಿಂಗಪುರದಲ್ಲಿ ನಡೆದ ಸಮಾರಂಭದಲ್ಲಿ ಹಂಗಾಮಿ ಹೈಕಮಿಷನರ್‌ ನಿನಾದ್‌ ಎಸ್‌. ದೇಶಪಾಂಡೆ ಅವರು ರಾಷ್ಟ್ರಪತಿಗಳ ಭಾಷಣ ಓದಿದರು. 600ಕ್ಕೂ ಹೆಚ್ಚು ಭಾರತೀಯರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry