ಬೋಳು ತಲೆಗೆ ಒಲಿದ ಮಾಡೆಲಿಂಗ್‌

7

ಬೋಳು ತಲೆಗೆ ಒಲಿದ ಮಾಡೆಲಿಂಗ್‌

Published:
Updated:
ಬೋಳು ತಲೆಗೆ ಒಲಿದ ಮಾಡೆಲಿಂಗ್‌

ಕಾಂತಿಯುತ ತ್ವಚೆ, ಹೊಳೆವ ಕೇಶರಾಶಿ, ಬಳುಕುವ ಬಳ್ಳಿಯಂಥ ಮೈಮಾಟ, ಚಂದದ ನೋಟ ಇದ್ದರೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚಬಹುದು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಬೋಳುತಲೆಯನ್ನೇ ಮುಖ್ಯವಾಗಿಸಿಕೊಂಡು ಮಾಡೆಲ್‌ ಆಗಿದ್ದಾರೆ ಸ್ವೀಡನ್‌ನ ಥೆರೆಸೆ ಹಾನಾಸೂನ್‌.

ಥೆರೆಸೆ ಅವರಿಗೆ 14 ವರ್ಷವಾದಾಗಲೇ ಕೂದಲು ಉದುರುವುದಕ್ಕೆ ಶುರುವಾಯಿತು. ಪ್ರಾರಂಭದಲ್ಲಿ ಇದು ಕ್ಯಾನ್ಸರ್‌ ಲಕ್ಷಣ ಎಂದೇ ಹೆದರಿದ್ದರು. ತನಗಿರುವ ಅಲೊಪೆಸಿಯಾ ಮಾರಣಾಂತಿಕ ಕಾಯಿಲೆ ಅಲ್ಲ ಎಂದು ತಿಳಿದ ಅವರು ಬೋಳುತಲೆಯನ್ನು ಮರೆಮಾಚುವುದಕ್ಕಾಗಿ ವಿಗ್‌ ಬಳಸಲು ಆರಂಭಿಸಿದರು. ಮನೆಮಂದಿ ಹಾಗೂ ಕೆಲವೇ ಕೆಲವು ಸ್ನೇಹಿತರನ್ನು ಬಿಟ್ಟರೆ ಯಾರಿಗೂ ಥೆರೆಸೆ ಕೇಶರಾಶಿ ನಕಲು ಎಂದು ಗೊತ್ತೇ ಇರಲಿಲ್ಲ.

ಸುಳ್ಳನ್ನೇ ಸತ್ಯ ಎಂದು ಎಷ್ಟು ದಿನ ಬಿಂಬಿಸುವುದು. 26 ವರ್ಷದ ಥೆರೆಸೆ ಒಂದು ದಿನ ತನ್ನ ಕೃತಕ ಕೇಶರಾಶಿ ಕಳಚಿಟ್ಟು ನೈಜತೆ ತೆರೆದಿಟ್ಟರು. ಇದಾದ ಮೇಲೆಯೇ ಅವರ ಕನಸಿನ ಕ್ಷೇತ್ರವಾದ ಮಾಡೆಲಿಂಗ್‌ನಲ್ಲಿ ಅವರಿಗೆ ಅವಕಾಶವೂ ಸಿಕ್ಕಿತು. ಸದ್ಯ ಜನಪ್ರಿಯ ಲಿಂಗ್ರಿ ಬ್ರ್ಯಾಂಡ್‌ಗಳಿಗೆ ಥೆರೆಸೆ ರೂಪದರ್ಶಿ.

‘ನಾನಿದನ್ನೂ ಬಹಳ ಮೊದಲೇ ಮಾಡಬೇಕಿತ್ತು. ನನ್ನಂತೆ ಕೂದಲು ಇಲ್ಲದೆ ಇರುವ ಎಷ್ಟೋ ಮಹಿಳೆಯರಿಗೆ ಇದರಿಂದ ಆತ್ಮವಿಶ್ವಾಸ ಬರುತ್ತಿತ್ತು. ಕೃತಕ ಕೇಶರಾಶಿ ಇದ್ದುದರಿಂದ ನಾನು ತುಂಬಾ ಸೂಕ್ಷ್ಮ ಮನಸಿನವಳಾಗಿಬಿಟ್ಟಿದ್ದೆ. ಈಗ ತಲೆಯ ಮೇಲಿನ ದೊಡ್ಡ ಭಾರ ಕಳಚಿಟ್ಟಂತೆ ಭಾಸವಾಗುತ್ತಿದೆ. ಮನಸು ಹಗುರಾಗಿದೆ. ನೀವು ಹೇಗಿದ್ದೀರೊ ಹಾಗೆ ನಿಮ್ಮನ್ನು ಒಪ್ಪಿಕೊಳ್ಳದಿದ್ದರೆ ಅಂಥವರಿಗೆ ನಿಮ್ಮ ಬದುಕಿನಲ್ಲಿ ಜಾಗ ನೀಡಬೇಡಿ’ ಎಂದು ಕಿವಿಮಾತನ್ನೂ ಹೇಳಿದ್ದಾರೆ ಥೆರೆಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry