ಮಹದಾಯಿ ಸಮಸ್ಯೆಗೆ ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ ಎಂದು ನಾನು ಹೇಳಿಲ್ಲ: ಸದಾನಂದ ಗೌಡ

7

ಮಹದಾಯಿ ಸಮಸ್ಯೆಗೆ ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ ಎಂದು ನಾನು ಹೇಳಿಲ್ಲ: ಸದಾನಂದ ಗೌಡ

Published:
Updated:
ಮಹದಾಯಿ ಸಮಸ್ಯೆಗೆ ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ ಎಂದು ನಾನು ಹೇಳಿಲ್ಲ: ಸದಾನಂದ ಗೌಡ

ಬೆಂಗಳೂರು: ಮಹದಾಯಿ ಉತ್ತರ ಕರ್ನಾಟಕದ ಸಮಸ್ಯೆ, ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು  ಹೇಳಿದ್ದು ಚರ್ಚೆಗಾಸ್ಪದವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿತ್ತು.

ಆದರೆ ತಾನು ಆ ರೀತಿ ಹೇಳಿಲ್ಲ ಎಂದ ಸದಾನಂದ ಗೌಡರು  " ಮಹದಾಯಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆ "ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸುವ ಅಗತ್ಯವಿದೆ ಎಂಬ ನನ್ನ ಹೇಳಿಕೆಯನ್ನು ತಿರುಚಲಾಗಿದೆ , ಸುಳ್ಳು ಹಬ್ಬಿಸಿ ಜನರನ್ನು ಗೊಂದಲಕ್ಕೆ ತಳ್ಳುವ ಕಿಡಿಗೇಡಿಗಳಿಗೆ ಇದೊಂದು ಉದ್ಯೋಗವಾಗಿ ಬಿಟ್ಟಿದೆ ಎಂದು ಟ್ವೀಟಿಸಿದ್ದಾರೆ.

ಸದಾನಂದ ಗೌಡರು ಹೇಳಿದ್ದೇನು?
ಮಹದಾಯಿ ಯೋಜನೆ ವಿವಾದ ಬಗೆಹರಿಸಲು  ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಜನವರಿ.24ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ  ಸಮಾಚಾರ ಡಾಟ್ ಕಾಂ ವೆಬ್‍ ಪೋರ್ಟಲ್ ಸದಾನಂದಗೌಡರಲ್ಲಿ ಪ್ರತಿಕ್ರಿಯೆ ಕೇಳಿತ್ತು. ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿವಿಎಸ್, ಉತ್ತರ ಕರ್ನಾಟಕಕ್ಕೆ ಈ ಇಶ್ಯೂ ಇರುವಂಥದ್ದು, ಆದ ಕಾರಣ ಇದನ್ನು ಸುಮ್ಮನೆ ರಾಜ್ಯಾದ್ಯಂತ ಎಕ್ಸ್ಟೆಂಡ್ ಮಾಡಿಕೊಂಡು ಜನರಿಗೆ ಭಾರಿ ದೊಡ್ಡ ಕಿರುಕುಳ ಕೊಡುವಂಥದ್ದು ಒಳ್ಳೆ ಸಂಪ್ರದಾಯವಲ್ಲ.
ನಿಜ, ನಮ್ಮ ಹಕ್ಕುಗಳು ಬಂದಾಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ  ಪ್ರತಿಭಟನೆ ಮಾಡುವ ಹಕ್ಕು ಇದೆ. This is an Issue  pertaining  North Karnataka. Southern part of the State ಮಾಡುವಂತದ್ದು ಅಷ್ಟು ಅಗತ್ಯವಿಲ್ಲ ಅಂತ ಅನಿಸಿಕೆ.
ಕಾವೇರಿ ಇಶ್ಯೂ ಬಂದಾಗ ಯಾವ ನಾರ್ತ್ ಕರ್ನಾಟಕದವರೂ ಮಾತನಾಡಿಲ್ಲ  ಎಂದು ಸದಾನಂದ ಗೌಡರು ಹೇಳಿರುವ ಆಡಿಯೊ ರೆಕಾರ್ಡ್ ಇಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry