ಬಾಹ್ಯಾಕಾಶ ಸಿನಿಮಾ

7

ಬಾಹ್ಯಾಕಾಶ ಸಿನಿಮಾ

Published:
Updated:
ಬಾಹ್ಯಾಕಾಶ ಸಿನಿಮಾ

ಶಕ್ತಿ ಸುಂದರ್‌ ರಾಜನ್‌ ನಿರ್ದೇಶನದ ತಮಿಳು ಸಿನಿಮಾ ‘ಟಿಕ್‌ ಟಿಕ್‌ ಟಿಕ್‌’ ಚಿತ್ರದ ಟ್ರೇಲರ್‌ ನವೆಂಬರ್‌ನಲ್ಲಿ ಬಿಡುಗಡೆಯಾದಾಗಲೇ ಸಿನಿ ಅಭಿಮಾನಿಗಳ ಮನ ಗೆದ್ದಿತ್ತು. ಚಿತ್ರದ ಕುರಿತು ಸಾಕಷ್ಟು ಚರ್ಚೆಗಳೂ ನಡೆದವು. ‘ಭಾರತದ ಮೊದಲ ಬಾಹ್ಯಾಕಾಶ ಸಿನಿಮಾ’ ಎನ್ನುವ ಹೆಗ್ಗಳಿಕೆಯೂ ಚಿತ್ರಕ್ಕೆ ಇದೆ.

ಇತ್ತೀಚೆಗೆ ಇದೇ ಚಿತ್ರದ ತೆಲುಗು ಟ್ರೇಲರ್‌ ಬಿಡುಗಡೆಯಾಗಿದ್ದು ಮತ್ತೊಮ್ಮೆ ಸುದ್ದಿಯಲ್ಲಿದೆ. ಮೊನ್ನೆಮೊನ್ನೆಯಷ್ಟೇ ಬಿಡುಗಡೆಗೊಂಡ ತೆಲುಗು ಟ್ರೇಲರ್ ಅನ್ನು ಸುಮಾರು ಐದು ಲಕ್ಷ ಜನ ವೀಕ್ಷಿಸಿದ್ದಾರೆ.

ಜಯಂ ರವಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಆಕಾಶದಿಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಬೀಳುತ್ತದೆ. ಇದೊಂದು ದಾಳಿಯೇ ಎಂದು ಪರಿಗಣಿಸಿ ಮುಂದೆ ಆಗುವ ಅನಾಹುತವನ್ನು ತಡೆಯಲು ತಂಡವೊಂದು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸುತ್ತದೆ. ಅಲ್ಲಿಯೂ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗುತ್ತದೆ. ನಾಯಕನಿಗೆ ಏನಾಗುತ್ತದೆ ಎನ್ನುವ ಕುತೂಹಲ ಉಳಿಸಿ ಟ್ರೇಲರ್‌ ಮುಗಿಯುತ್ತದೆ. ಪದ್ಮಾವತಿ ಚಡಲವಡಾ ಚಿತ್ರ ನಿರ್ಮಾಣ ಮಾಡಲಿದ್ದಾರೆ. ನಿವೇದಿತಾ ಪೇತುರಾಜ್‌ ಚಿತ್ರದಲ್ಲಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕ ಜನವರಿ 26.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry