ಮೂರನೇ ಟೆಸ್ಟ್ ಪಂದ್ಯ: ದ. ಆಫ್ರಿಕಾಗೆ 241 ರನ್‌ಗಳ ಗೆಲುವಿನ ಗುರಿ

7

ಮೂರನೇ ಟೆಸ್ಟ್ ಪಂದ್ಯ: ದ. ಆಫ್ರಿಕಾಗೆ 241 ರನ್‌ಗಳ ಗೆಲುವಿನ ಗುರಿ

Published:
Updated:
ಮೂರನೇ ಟೆಸ್ಟ್ ಪಂದ್ಯ: ದ. ಆಫ್ರಿಕಾಗೆ 241 ರನ್‌ಗಳ ಗೆಲುವಿನ ಗುರಿ

ಜೊಹಾನ್ಸ್‌ಬರ್ಗ್‌: ಎರಡನೇ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್‌ ಆಗಿರುವ ಕೊಹ್ಲಿ ಬಳಗ ಆತಿಥೇಯರಿಗೆ 241 ರನ್‌ಗಳ ಗೆಲುವಿನ ಗುರಿ ನೀಡಿದೆ.

ವಿವಾದಿತ ಪಿಚ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾಗೆ ಪ್ರತಿರೋಧ ತೋರಿ 247 ರನ್‌ ದಾಖಲಿಸಿತು. ಕೊಹ್ಲಿ 41, ರಹಾನೆ 48 ಹಾಗೂ ಭುವನೇಶ್ವರ್ ಕುಮಾರ್‌ ಅವರು 33 ರನ್‌ಗಳ ನೆರವಿನಿಂದ ಭಾರತ 200 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

ಮೊದಲ ಇನಿಂಗ್ಸ್‌ನಲ್ಲಿ 7 ರನ್‌ಗಳ ಮುನ್ನಡೆ ಪಡೆದಿರುವ ಆಫ್ರಿಕಾ ಅಂತಿಮ ಟೆಸ್ಟ್‌ ಪಂದ್ಯವನ್ನು ಗೆಲ್ಲಲು 241 ರನ್‌ ಗಳಿಸಬೇಕಿದೆ.

ರಬಾಡ, ವೆರ್ನಾನ್‌ ಫಿಲಾಂಡರ್‌, ಮಾರ್ನೆ ಮಾರ್ಕೆಲ್‌ ತಲಾ 3 ವಿಕೆಟ್ ಪಡೆದರು.

ದಕ್ಷಿಣಾ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 5 ರನ್‌ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry