ಸತ್ಯವಂತರಿಗೆ ಸುಲಭವಾಗಿ ಸಿಗಲಿದೆ 'ಸಾಲ'

7

ಸತ್ಯವಂತರಿಗೆ ಸುಲಭವಾಗಿ ಸಿಗಲಿದೆ 'ಸಾಲ'

Published:
Updated:
ಸತ್ಯವಂತರಿಗೆ ಸುಲಭವಾಗಿ ಸಿಗಲಿದೆ 'ಸಾಲ'

ನವದೆಹಲಿ: ಸಾಲ ಪಡೆದುಕೊಂಡರೆ ಅದನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುತ್ತಾರೆ ಎಂಬ ಭರವಸೆ ಇರುವ ಪ್ರಾಮಾಣಿಕ ವ್ಯಕ್ತಿಗಳಿಗೆ ಸಾರ್ವಜನಿಕ ವಲಯ ಬ್ಯಾಂಕ್‍ಗಳಿಂದ ನಿರಾತಂಕವಾಗಿ ಸಾಲ ಲಭ್ಯವಾಗುವ ನೀತಿಗಳನ್ನು ಜಾರಿ ಮಾಡಲು ಚಿಂತನೆ ನಡೆಸಿದೆ ಎಂದು ಕೇಂದ್ರ ವಿತ್ತ ಇಲಾಖೆಯ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.

ದೇಶದ  20 ಸಾರ್ವಜನಿಕ ವಲಯ ಬ್ಯಾಂಕ್‍ಗಳಲ್ಲಿ ₹88,139 ಕೋಟಿ ಬಂಡವಾಳವನ್ನುಂಟು ಮಾಡಲು ಸರ್ಕಾರ ಚಿಂತಿಸಿದೆ. ಆದ್ದರಿಂದಲೇ ಸಾಲಕ್ಕೆ ಈ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದೊಡ್ಡ  ಮೊತ್ತದ ಸಾಲ ನೀಡುವುದಕ್ಕಾಗಿರುವ ಮಾನದಂಡವನ್ನು ಮತ್ತಷ್ಟು ಬಿಗಿ ಮಾಡಲು ಕೇಂದ್ರ ವಿತ್ತ ಸಚಿವ ಆದೇಶಿಸಿದ್ದರು. ಅದೇ ವೇಳೆ ಸಾಲ ವಸೂಲಾತಿ ಕ್ರಮಗಳು ಮತ್ತಷ್ಟು ಬಿಗಿಗೊಳಿಸಲಾಗುವುದು.

ದೇಶದ ಸಾರ್ವಜನಿಕ ವಲಯ ಬ್ಯಾಂಕ್‍ಗಳು ಎದುರಿಸುವ ಬಹುದೊಡ್ಡ ಸವಾಲುಗಳೆಂದರೆ ಮರು ಪಾವತಿಯಾಗದ ಸಾಲ ಆಗಿವೆ. ಆದಾಗ್ಯೂ, ಸಾರ್ವಜನಿಕ ವಲಯಬ್ಯಾಂಕ್‍ಗಳಿಗೆ ಪಾವತಿಯಾಗಬೇಕಾದ ಸಾಲದ ಮೊತ್ತ  ₹8 ಲಕ್ಷ ಕೋಟಿ ಇದೆ.

ಸಾಲ ಮರುಪಾವತಿ ಮಾಡಿದ ವ್ಯಕ್ತಿಗಳಿಗೆ ಮತ್ತೊಮ್ಮೆ ಸಾಲ ನೀಡುವಾಗ ಯಾವುದೇ ಜಂಜಾಟವಿಲ್ಲದೆ ಸಾಲ ನೀಡುವುದಕ್ಕಾಗಿ ಈ ನೀತಿ ಮಾಡಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry