ಐನ್‌ಸ್ಟೀನ್‌ ಮೀರಿಸಿದ ಭಾರತದ ಬಾಲಕ

7

ಐನ್‌ಸ್ಟೀನ್‌ ಮೀರಿಸಿದ ಭಾರತದ ಬಾಲಕ

Published:
Updated:
ಐನ್‌ಸ್ಟೀನ್‌ ಮೀರಿಸಿದ ಭಾರತದ ಬಾಲಕ

ಲಂಡನ್‌: ‘ಮೆನ್ಸಾ ಬುದ್ಧಿಮತ್ತೆ ಪರೀಕ್ಷೆಯಲ್ಲಿ’ ಭಾರತ ಸಂಜಾತ ಬ್ರಿಟನ್‌ ವಿದ್ಯಾರ್ಥಿ ಮೆಹುಲ್‌ ಗರ್ಗ್ (10) ಗರಿಷ್ಠ ಅಂಕ ಪಡೆದಿದ್ದಾನೆ. ಈ ಮೂಲಕ ಆಲ್‌ಬರ್ಟ್‌ ಐನ್‌ಸ್ಟೀನ್‌, ಸ್ಟೆಫನ್‌ ಹಾಕಿಂಗ್‌ ಅವರಂಥ ವಿಜ್ಞಾನಿಗಳನ್ನೂ ಮೀರಿಸಿದ್ದಾನೆ. ಜೊತೆಗೆ ಗರಿಷ್ಠ ಅಂಕ ಪಡೆದಿರುವ ಅತ್ಯಂತ ಕಿರಿಯ ಬಾಲಕ ಎನಿಸಿದ್ದಾನೆ.

ಆಲ್‌ಬರ್ಟ್‌ ಐನ್‌ಸ್ಟೀನ್‌, ಸ್ಟೆಫನ್‌ ಹಾಕಿಂಗ್‌ ಅವರಿಗಿಂತ ಎರಡು ಹೆಚ್ಚು ಅಂಕ ಪಡೆದಿರುವ ಮೆಹುಲ್‌, ಕಳೆದ ವರ್ಷ ಇದೇ ಪರೀಕ್ಷೆಯಲ್ಲಿ ಗರಿಷ್ಠ 162 ಅಂಕ ಪಡೆಯುವ ಮೂಲಕ ದಾಖಲೆ ಮಾಡಿದ್ದ ಧ್ರುವ ಗರ್ಗ್‌ನ (13) ತಮ್ಮ. ‘ನನ್ನ ಅಣ್ಣನೇ ನನಗೆ ಸ್ಫೂರ್ತಿ. ಅವನಂತೆ ನಾನೂ ಹೆಚ್ಚು ಅಂಕ ಗಳಿಸಬೇಕೆಂದು ನಿರ್ಧರಿಸಿ ಪ್ರಯತ್ನ ಪಟ್ಟಿದ್ದೇನೆ’ ಎಂದಿದ್ದಾನೆ ಮೆಹುಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry