ಉಗ್ರ ಸಂಘಟನೆಗಳ ಮುಖಂಡರಿಗೆ ನಿರ್ಬಂಧ

7

ಉಗ್ರ ಸಂಘಟನೆಗಳ ಮುಖಂಡರಿಗೆ ನಿರ್ಬಂಧ

Published:
Updated:
ಉಗ್ರ ಸಂಘಟನೆಗಳ ಮುಖಂಡರಿಗೆ ನಿರ್ಬಂಧ

ವಾಷಿಂಗ್ಟನ್‌: ತಾಲಿಬಾನ್‌ ಮತ್ತು ಹಕ್ಕಾನಿ ನೆಟ್‌ವರ್ಕ್‌ ಸಂಘಟನೆಗಳ ಆರು ಮುಖಂಡರ ಮೇಲೆ ಅಮೆರಿಕ ಆಡಳಿವು ನಿರ್ಬಂಧ ವಿಧಿಸಿದೆ. ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವುದು ಹಾಗೂ ಭಯೋತ್ಪಾದನಾ ಸಂಘಟನೆಗಳಿಗೆ ಧನ ಸಹಾಯ ಮಾಡುವುದನ್ನು ತಪ್ಪಿಸಲು ಅಮೆರಿಕದ ಜೊತೆ ಕೈಜೋಡಿಸುವಂತೆ ಅದು ಪಾಕಿಸ್ತಾನಕ್ಕೆ ಹೇಳಿದೆ.

ಈ ನಿರ್ಬಂಧಿಸಲಾಗಿರುವ ಆರು ಮುಖಂಡರನ್ನು ಅಮೆರಿಕವು ಜಾಗತಿಕ ಭಯೋತ್ಪಾದಕರು ಎಂದು ಘೋಷಿಸಿದೆ. ಜೊತೆಗೆ, ತನ್ನ ವ್ಯಾಪ್ತಿಯಲ್ಲಿ ಇರುವ ಈ ಭಯೋತ್ಪಾದಕರ ಆಸ್ತಿಗಳನ್ನು ಅದು ಮುಟ್ಟುಗೋಲು ಹಾಕಿಕೊಂಡಿದ್ದು, ಇವರ ಜೊತೆ ಯಾವುದೇ ರೀತಿಯ ವ್ಯವಹಾರ ನಡೆಸದಂತೆ ಅಮೆರಿಕದ ಪ್ರಜೆಗಳಿಗೆ ಹೇಳಿದೆ.

2008ರಲ್ಲಿ 58 ಜನರ ಸಾವಿಗೆ ಕಾರಣವಾದ ಕಾಬೂಲ್‌ ದಾಳಿ ಸೇರಿದಂತೆ ಈ ಉಗ್ರರು ಹಲವು ಭಯೋತ್ಪಾದನಾ ಕೃತ್ಯ ಹಾಗೂ ಅಪಹರಣಗಳಲ್ಲಿ ಭಾಗಿಯಾಗಿದ್ದು, ಮುಂದೆ ಇಂಥ ಕೃತ್ಯ ನಡೆಯದಂತೆ ಪಾಕಿಸ್ತಾನ ಎಚ್ಚರಿಕೆ ವಹಿಸಬೇಕಿದೆ ಎಂದು ಅಮೆರಿಕ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry