ಇದೇನಾ ಸಂಪ್ರದಾಯ?

7

ಇದೇನಾ ಸಂಪ್ರದಾಯ?

Published:
Updated:

ಮೈಸೂರಿನಲ್ಲಿ ನಡೆದ ಬಿಜೆಪಿ ‘ಪರಿವರ್ತನಾ ಯಾತ್ರೆ’ಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ವರದಿಯಾಗಿದೆ (ಪ್ರ.ವಾ., ಜ. 26 ).

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಯಡಿಯೂರಪ್ಪ ಅವರ ವಯಸ್ಸು 74 ವರ್ಷ. ಅಮಿತ್ ಶಾ 53 ವರ್ಷ ವಯಸ್ಸಿನವರು. ಮಾತೆತ್ತಿದರೆ ಸಂಪ್ರದಾಯ, ಸಂಸ್ಕೃತಿ, ಸಭ್ಯತೆ ಎಂದು ಬಡಬಡಿಸುವ ಬಿಜೆಪಿಯವರಿಗೆ, ವ್ಯಕ್ತಿಯೊಬ್ಬ ತಮಗಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ಕಾಲಿಗೆ ಬೀಳುವುದು ಅಸಮಂಜಸವಾಗಿ ಕಾಣುವುದಿಲ್ಲವೇ?

ಅಧಿಕಾರದ ಲಾಲಸೆ ಮತ್ತು ಮದ, ಮನುಷ್ಯನ ಮತಿಯನ್ನು ಹೇಗೆ ಮಂಕುಗೊಳಿಸುತ್ತವೆಎಂಬುದು ಇಲ್ಲಿ ವ್ಯಕ್ತವಾಗುತ್ತದೆ.

–ಆನಂದ ರಾಮತೀರ್ಥ, ಜಮಖಂಡಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry