ಕುಸ್ತಿ: ಪಂಜಾಬ್‌ಗೆ ಪ್ರಶಸ್ತಿ

7

ಕುಸ್ತಿ: ಪಂಜಾಬ್‌ಗೆ ಪ್ರಶಸ್ತಿ

Published:
Updated:

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಹೆಲೆನ್‌ ಮರೌಲಿಸ್‌ಗೆ ಆಘಾತ ನೀಡಿದ ಪೂಜಾ ಧಾಂಡಾ, ಪಂಜಾಬ್‌ ರಾಯಲ್ಸ್‌ ಪಾಳಯದಲ್ಲಿ ಖುಷಿ ಮೂಡಿಸಿದರು.

ಪೂಜಾ ಅವರ ಶ್ರೇಷ್ಠ ಆಟದ ಬಲದಿಂದ ರಾಯಲ್ಸ್‌ ತಂಡ ಪ್ರೊ ಕುಸ್ತಿ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಶುಕ್ರವಾರ ನಡೆದ ಹೋರಾಟದಲ್ಲಿ ಪಂಜಾಬ್‌ 44–35 ಪಾಯಿಂಟ್ಸ್‌ನಿಂದ ಹರಿಯಾಣ ಹ್ಯಾಮರ್ಸ್‌ ತಂಡವನ್ನು ಸೋಲಿಸಿತು.

2013 ಮತ್ತು 2017ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಪೂಜಾ 57 ಕೆ.ಜಿ. ವಿಭಾಗದಲ್ಲಿ 3–2ರಿಂದ ಹೆಲೆನ್‌ ಸವಾಲು ಮೀರಿದರು. ಇನ್ನೊಂದು ಹೋರಾಟದಲ್ಲಿ ಜುರಾಬಿ ಇಯಾಕೊಬಿಶ್ವಿಲಿ 4–0 ರಿಂದ ಎದುರಾಳಿಯನ್ನು ಹಣಿದರು.

ಹರಿಯಾಣ ತಂಡದ ವ್ಲಾದಿಮಿರ್‌ ಮೊದಲ ಹೋರಾಟದಲ್ಲಿ 4–0ರಿಂದ ನವೀನ್‌ ಕುಮಾರ್‌ ಎದುರು ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry