ಹಾಕಿ: ಬೆಂಗಳೂರು ವಿ.ವಿಗೆ ಜಯ

7

ಹಾಕಿ: ಬೆಂಗಳೂರು ವಿ.ವಿಗೆ ಜಯ

Published:
Updated:

ಬೆಂಗಳೂರು: ವೀರಣ್ಣ ಗೌಡ ಪಾಟೀಲ್‌ ಅವರ ಎರಡು ಗೋಲುಗಳ ನೆರ ವಿನಿಂದ ಬೆಂಗಳೂರು ವಿಶ್ವವಿದ್ಯಾಲಯ ತಂಡ ಕಾರುಣ್ಯ ವಿ.ವಿ ಎದುರು ಗೆದ್ದಿದೆ.

ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಶುಕ್ರವಾರ ಬೆಂಗಳೂರು ವಿ.ವಿ 4–0 ಗೋಲುಗಳಿಂದ ಗೆದ್ದು ಸೆಮಿಫೈನಲ್‌ ಸೂಪರ್ ಲೀಗ್ ಹಂತ ಪ್ರವೇಶಿಸಿದೆ.

ವಿಜಯೀ ತಂಡದ ಪೂವಣ್ಣ (3ನೇ ನಿ.), ಕೆ.ಆರ್.ಭರತ್‌ (29ನೇ ನಿ.), ಎಮ್‌.ಧನುಷ್‌ (33ನೇ ನಿ.), ವೀರಣ್ಣ ಗೌಡ ಪಾಟೀಲ್‌ (1, 49ನೇ ನಿ.) ಗೋಲು ತಂದಿತ್ತರು.

ಇತರ ಪಂದ್ಯಗಳಲ್ಲಿ ಕೃಷ್ಣ ದೇವರಾಯ ವಿ.ವಿ 3–1ರಲ್ಲಿ ಎಸ್‌ಆರ್‌ಎಮ್‌ ಮೇಲೂ, ಆಚಾರ್ಯ ನಾಗಾರ್ಜುನ ವಿ.ವಿ 6–3 ರಲ್ಲಿ ಒಸ್ಮಾನಿಯಾ ವಿ.ವಿ ವಿರುದ್ಧವೂ ಗೆದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry