ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧೆ: ಸಚಿವ ಲಾಡ್‌

7

ಕಲಘಟಗಿ ಕ್ಷೇತ್ರದಿಂದಲೇ ಸ್ಪರ್ಧೆ: ಸಚಿವ ಲಾಡ್‌

Published:
Updated:

ಬಳ್ಳಾರಿ: ‘ಈಗ ಪ್ರತಿನಿಧಿಸುತ್ತಿರುವ ಕಲಘಟಗಿ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವೆ. ಅದನ್ನು ಬಿಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಈ ಮೂಲಕ ಬೇರೊಂದು ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎನ್ನುವ ಊಹಾಪೋಹಗಳಿಗೆ ಅವರು ತೆರೆ ಎಳೆದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕಾರಣ ಅವಕಾಶವಾದಿಯಾಗಿರುವುದು ತಪ್ಪಲ್ಲ. ಬಿಜೆಪಿ ಶಾಸಕ ಆನಂದ್‌ ಸಿಂಗ್‌, ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರೂ ಕೂಡ ಅವಕಾಶ ಬಯಸಿ ಕಾಂಗ್ರೆಸ್‌ಗೆ ಬಂದರೆ ತಪ್ಪೇನಿಲ್ಲ’ ಎಂದರು.

‘ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ಆನಂದ್‌ಸಿಂಗ್‌, ನಾಗೇಂದ್ರ ಸೇರಿದಂತೆ ಯಾರೊಬ್ಬರ ಹೆಸರನ್ನೂ ನಾನು ಉಲ್ಲೇಖಿಸಿರಲಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry