ಮಾರುತಿ ಲಾಭ ಅಲ್ಪ ಏರಿಕೆ

7

ಮಾರುತಿ ಲಾಭ ಅಲ್ಪ ಏರಿಕೆ

Published:
Updated:
ಮಾರುತಿ ಲಾಭ ಅಲ್ಪ ಏರಿಕೆ

ನವದೆಹಲಿ: ಕಾರು ತಯಾರಿಕೆಯಲ್ಲಿ ದೇಶದ ಅತಿದೊಡ್ಡ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ, ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 1,799 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 1,742 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 2.96 ರಷ್ಟು ಮಾತ್ರವೇ ಹೆಚ್ಚಾಗಿದೆ.

ತ್ರೈಮಾಸಿಕದಲ್ಲಿ ಒಟ್ಟು ವರಮಾನ ₹ 19,793 ಕೋಟಿಗಳಿಂದ ₹ 19,528 ಕೋಟಿಗಳಿಗೆ ಇಳಿಕೆಯಾಗಿದೆ.

ತೆರಿಗೆ ದರ ಹೆಚ್ಚಳ ಮತ್ತು ಕಾರ್ಯಾಚರಣೆಯಿಂದ ಬಂದಿರುವ ಲಾಭದಲ್ಲಿ ಇಳಿಕೆಯಿಂದಾಗಿ ನಿವ್ವಳ ಲಾಭದಲ್ಲಿ ಅಲ್ಪ ಏರಿಕೆ ಕಾಣುಂತಾಗಿದೆ ಎಂದು ಕಂಪನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry