ವ್ಯಾಪಾರ ಕೊರತೆ 3 ವರ್ಷದ ಗರಿಷ್ಠ

7

ವ್ಯಾಪಾರ ಕೊರತೆ 3 ವರ್ಷದ ಗರಿಷ್ಠ

Published:
Updated:
ವ್ಯಾಪಾರ ಕೊರತೆ 3 ವರ್ಷದ ಗರಿಷ್ಠ

ನವದೆಹಲಿ: ದೇಶದ ರಫ್ತು ಮತ್ತು ಆಮದು ವಹಿವಾಟಿನ ನಡುವಿನ ಅಂತರ ಶೇ 41 ರಷ್ಟು ಏರಿಕೆ ಕಂಡಿದೆ.

ಡಿಸೆಂಬರ್‌ನಲ್ಲಿ ವ್ಯಾಪಾರ ಕೊರತೆ ಅಂತರ ₹ 93,744 ಕೋಟಿಗಳಿಗೆ ಏರಿಕೆಯಾಗಿದೆ. ಇದು ಮೂರು ವರ್ಷಗಳಲ್ಲಿಯೇ ಅತ್ಯಂತ ಗರಿಷ್ಠ ಮಟ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಫ್ತು ವಹಿವಾಟು: ದೇಶದ ರಫ್ತು ವಹಿವಾಟು ಡಿಸೆಂಬರ್‌ನಲ್ಲಿ ಶೇ 12.36 ರಷ್ಟು ಏರಿಕೆ ಕಂಡಿದ್ದು, ₹ 1.70 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ.

ಎಂಜಿನಿಯರಿಂಗ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 25 ರಷ್ಟು ಏರಿಕೆ ಕಂಡಿರುವುದರಿಂದ ಒಟ್ಟಾರೆ ರಫ್ತು ವಹಿವಾಟು ಉತ್ತಮ ಪ್ರಗತಿ ಸಾಧಿಸಿದೆ.

2016ರ ಆಗಸ್ಟ್‌ನಿಂದಲೂ ರಫ್ತು ವಹಿವಾಟು ಸಕಾರಾತ್ಮಕ ಮಟ್ಟದಲ್ಲಿಯೇ ಇದೆ. 2017ರ ಅಕ್ಟೋಬರ್‌ನಲ್ಲಿ ಮಾತ್ರ ಶೇ 1.1ರಷ್ಟು ಇಳಿಕೆ ಕಂಡಿತ್ತು ಎಂದು ಸಚಿವಾಲಯ ತಿಳಿಸಿದೆ.

‘ಆರ್ಥಿಕ ವರ್ಷದ 9 ತಿಂಗಳಿನಲ್ಲಿ ರಫ್ತು ವಹಿವಾಟಿನ ಮೊತ್ತ ₹ 14.11 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ. ₹ 18.90 ಲಕ್ಷ ಕೋಟಿಯ ಮೈಲಿಗಲ್ಲು ತಲುಪುವ ವಿಶ್ವಾಸವಿದೆ’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಗಣೇಶ್‌ ಕುಮಾರ್ ಗುಪ್ತಾ ಹೇಳಿದ್ದಾರೆ.

ಆಮದು ವಹಿವಾಟು: ಆಮದು ವಹಿವಾಟು ಶೇ 21.22 ರಷ್ಟು ಏರಿಕೆ ಕಂಡಿದ್ದು, ₹ 2.64 ಲಕ್ಷ ಕೋಟಿಗಳಿಗೆ ತಲುಪಿದೆ. ಚಿನ್ನದ ಆಮದು ಶೇ 71. 5 ರಷ್ಟು ಏರಿಕೆ ಕಂಡಿದೆ. ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಪ್ರಮಾಣವೂ ಶೇ 35 ರಷ್ಟು ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry