ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಆರ್‍ ಅಂತರ್ಜಾಲ ತಾಣಕ್ಕೆ ಚಾಲನೆ

Last Updated 26 ಜನವರಿ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ವಿಐಆರ್ ಇಂಡಿಯಾ, ಸೇನಾ ಸಿಬ್ಬಂದಿಯ ಬಳಕೆಗಾಗಿಯೇ ತನ್ನ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಅಂತರ್ಜಾಲ ತಾಣ ವಿಐಆರ್‌ಇಂಡಿಯಾಡಾಟ್‌ಕಾಮ್‌ (virindia.com) ಆರಂಭಿಸಿದೆ.

ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ  ಆರ್‍.ಕೆ ಕೃಷ್ಣಕುಮಾರ್ ದಂಪತಿ, ಲೆಫ್ಟಿನೆಂಟ್ ಜನರಲ್ ಪಾರ್‍ನಾಯಕ್, ಮೇಜರ್ ಜನರಲ್ ನಿಜ್ಜಾರ್ ಅವರು ಈ ಅಂತರ್ಜಾಲ ತಾಣ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸೇನಾಪಡೆಗಳಿಗೆಂದೇ ಮೀಸಲಾದ ಡಿಜಿಟಲ್ ಮಾರಾಟ ಜಾಲ ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ಸೇನಾ ಪಡೆಗಳು, ಅರೆಸೇನಾ ಪಡೆಗಳು, ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು, ನಿವೃತ್ತ ಸೈನಿಕರು ಈ ಅಂತರ್ಜಾಲ ತಾಣದ ಪ್ರಯೋಜನ ಪಡೆದುಕೊಳ್ಳಬಹುದು.

ಕಂಪನಿಯು ಹಲವಾರು ಉತ್ಪನ್ನ ತಯಾರಿಕಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿವಿಧ ಬಗೆಯ ರಿಯಾಯ್ತಿ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT