ವಿದ್ಯಾರ್ಥಿನಿ ಆತ್ಮಹತ್ಯೆ: ಸಂಸ್ಥೆ ವಿರುದ್ಧ ದೂರು

7

ವಿದ್ಯಾರ್ಥಿನಿ ಆತ್ಮಹತ್ಯೆ: ಸಂಸ್ಥೆ ವಿರುದ್ಧ ದೂರು

Published:
Updated:

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತಂದೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿರುದ್ಧ ನಿರ್ಲಕ್ಷ್ಯ ದೂರನ್ನು ಪೊಲೀಸರಿಗೆ ನೀಡಿದ್ದಾರೆ.

ರಚನಾ (18) ಕಾಲೇಜು ಕಟ್ಟಡದ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಕೆ ಚಿತ್ರದುರ್ಗುದ ಶಿಕ್ಷಕ ಮಂಜುನಾಥ್ ಎಂಬುವವರ ಮಗಳು. ರಚನಾ ಸಾಯುವುದಕ್ಕೆ ಮೊದಲೇ ಬರೆದಿಟ್ಟಿರುವ ಪತ್ರದ ಬಗ್ಗೆ ಹೆತ್ತವರು ಸಂದೇಹ ವ್ಯಕ್ತಪಡಿಸಿದ ಕಾರಣ, ಆಕೆ ಪತ್ರವನ್ನು ಹಸ್ತಾಕ್ಷರ ತಜ್ಞರಲ್ಲಿಗೆ ಪರಿಶೀಲನೆಗೆ ಕಳುಹಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry