ಕಟ್ಟಡದಿಂದ ಬಿದ್ದು ಸಾವು

7

ಕಟ್ಟಡದಿಂದ ಬಿದ್ದು ಸಾವು

Published:
Updated:

ಬೆಂಗಳೂರು: ಕೆ.ಪಿ. ಅಗ್ರಹಾರದ ರಾಮದಾಸ್ ಲೇಔಟ್‌ನಲ್ಲಿ ಕಟ್ಟಡದ ಮೇಲಿನಿಂದ ಬಿದ್ದು ಯುವಕನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.

‘ಮೃತ ಯುವಕ, ವಸ್ತುಗಳ ಖರೀದಿಗೆಂದು ಅಂಗಡಿಗೆ ಹೋಗಿದ್ದ. ಈ ವೇಳೆ ಆಯತಪ್ಪಿ ನಿರ್ಮಾಣ ಹಂತದ ಕಾಲುವೆಗೆ ಬಿದ್ದಿದ್ದಾನೆ’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಕೆ.ಪಿ. ಅಗ್ರಹಾರ ಪೊಲೀಸರು ತಿಳಿಸಿದರು.

ಮೃತನ ಸಂಬಂಧಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಯಾರೂ ದೂರು ಕೊಟ್ಟಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry