‘ದುಶ್ಚಟದಿಂದ ದೂರವಿರಲು ಕ್ರೀಡೆ ನೆರವು’

7

‘ದುಶ್ಚಟದಿಂದ ದೂರವಿರಲು ಕ್ರೀಡೆ ನೆರವು’

Published:
Updated:
‘ದುಶ್ಚಟದಿಂದ ದೂರವಿರಲು ಕ್ರೀಡೆ ನೆರವು’

ಬೆಂಗಳೂರು: ಅಶಿಸ್ತು ಹಾಗೂ ದುಶ್ಚಟಗಳಿಂದ ದೂರವಿರಲು ಕ್ರೀಡೆ, ಸಾಹಿತ್ಯ, ನಾಟಕ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಎಂದು ಚಿನ್ಮಯ ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯಸ್ಥ ಕೆ.ವಾಸುದೇವ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಚಿನ್ಮಯ ವಿದ್ಯಾಮಂದಿರ ಪ್ರೌಢಶಾಲೆ ಹಾಗೂ ಎಸ್‍ವಿಆರ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಗ್ರಹಿಕೆ ಶಕ್ತಿಯ ಕೊರತೆಯುಳ್ಳ ಮಕ್ಕಳಿಗೆ ವಿಶೇಷ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಅವರ ಕಲಿಕಾ ಆಸಕ್ತಿಯನ್ನು ವೃದ್ಧಿಸಬೇಕು ಎಂದರು.

ಸಾಮಾಜಿಕ ಕಾರ್ಯಕರ್ತೆ ಸೌಮ್ಯ ರಾಮಲಿಂಗಾರೆಡ್ಡಿ, ‘ಪರಿಸರ ಹಾಗೂ ವೈಜ್ಞಾನಿಕ ಅರಿವಿನ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಣ ವಂಚಿತ ಮಕ್ಕಳಿಗೆ ಸರ್ಕಾರವೇ ಆಸಕ್ತಿ ವಹಿಸಿ ಶಿಕ್ಷಣ ಕೊಡಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry