ಕಾರಿಗೆ ಲಾರಿ ಡಿಕ್ಕಿ: ದಂಪತಿ ಸಾವು

7

ಕಾರಿಗೆ ಲಾರಿ ಡಿಕ್ಕಿ: ದಂಪತಿ ಸಾವು

Published:
Updated:

ಬೆಂಗಳೂರು: ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಶುಕ್ರವಾರ ಮಧ್ಯಾಹ್ನ ಕಾರಿಗೆ ಲಾರಿ ಗುದ್ದಿದ್ದರಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಲ್ಲೇಶ್ವರ ನಿವಾಸಿಗಳಾದ ರಾಮಚಂದ್ರ ಜಕಾತಿ (76) ಹಾಗೂ ಆಶಾ ಜಕಾತಿ (71) ಮೃತರು. ಕಾರಿನಲ್ಲಿದ್ದ ಅವರ ಮಗಳು ಜ್ಯೋತಿ, ಅಳಿಯ ಸತೀಶ್ ಹಾಗೂ ಮೊಮ್ಮಗಳು ಅರುಂಧತಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗಳ ಜತೆ ವಾಸವಾಗಿದ್ದ ದಂಪತಿ, ಕುಟುಂಬ ಸಮೇತ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ನೆಲಮಂಗಲ– ಕುಣಿಗಲ್ ಜಂಕ್ಷನ್‌ ಬಳಿ ವೇಗವಾಗಿ ಬರುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಒನ್‌ವೇಗೆ ನುಗ್ಗಿದೆ. ಈ ವೇಳೆ,ಎದುರಿಗೆ ಬರುತ್ತಿದ್ದ ಕಾರಿಗೆ ಗುದ್ದಿದೆ ಎಂದು ನೆಲಮಂಗಲ ಸಂಚಾರ ಪೊಲೀಸರು ತಿಳಿಸಿದರು.

ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದರಿಂದ ಸುಮಾರು ಎರಡು ಕಿಲೊ ಮೀಟರ್ ಸಂಚಾರ ದಟ್ಟಣೆ ಇತ್ತು. ಜಖಂಗೊಂಡ ಲಾರಿ ಹಾಗೂ ಕಾರನ್ನು ಸ್ಥಳಾಂತರ ಮಾಡಿದ ಬಳಿಕ ಸಂಚಾರ ಯಥಾಸ್ಥಿತಿಗೆ ಬಂದಿತು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry