ಕೋಲ್ಹಾಪುರದಲ್ಲಿ ನದಿಗೆ ಬಿದ್ದ ಮಿನಿ ಬಸ್: 13 ಮಂದಿ ಸಾವು

7

ಕೋಲ್ಹಾಪುರದಲ್ಲಿ ನದಿಗೆ ಬಿದ್ದ ಮಿನಿ ಬಸ್: 13 ಮಂದಿ ಸಾವು

Published:
Updated:
ಕೋಲ್ಹಾಪುರದಲ್ಲಿ ನದಿಗೆ ಬಿದ್ದ ಮಿನಿ ಬಸ್: 13 ಮಂದಿ ಸಾವು

ಕೋಲ್ಹಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ಕೋಲ್ಹಾಪುರ ನಗರದಲ್ಲಿ ಶುಕ್ರವಾರ ತಡರಾತ್ರಿ ನದಿಯೊಂದಕ್ಕೆ ಮಿನಿ ಬಸ್ ಉರುಳಿ ಬಿದ್ದಿದ್ದು, 13 ಮಂದಿ ಸಾವಿಗೀಡಾಗಿದ್ದಾರೆ.

ಅಲ್ಲಿನ ಸ್ಥಳೀಯ ಅಧಿಕಾರಿಗಳ ಪ್ರಕಾರ ತಡರಾತ್ರಿ ವೇಳೆ ಮಿನಿಬಸ್ ಪಂಚ್‍ಗಂಗಾ ಎಂಬ ನದಿಗೆ ಉರುಳಿ ಬಿದ್ದಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಬಸ್ಸಿನಲ್ಲಿ 17 ಮಂದಿ ಪ್ರಯಾಣಿಕರಿದ್ದರು.

ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರು ಮಹಿಳೆಯರದ್ದು ಛತ್ರಪತಿ ಪ್ರಮೀಳಾ ರಾಜೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರತ್ನಗಿರಿಯಿಂದ ಕೋಲ್ಹಾಪುರಕ್ಕೆ ಬಸ್ ಪ್ರಯಾಣಿಸುತ್ತಿತ್ತು.

ಚಾಲಕ ನಿಯಂತ್ರಣ  ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದ್ದು, ಸಂಭವ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry