ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಹರಾಜು: ಮಾರಾಟವಾದ ಮೊದಲ ಆಟಗಾರ ಧವನ್‌ಗೆ ₹ 5.20 ಕೋಟಿ, ಇನ್ನೂ ಬಿಕರಿಯಾಗದ ಗೇಲ್‌

578 ಆಟಗಾರರಿಗೆ ಅವಕಾಶ: ಯಾರಿಗೆ ಎಷ್ಟು ಬೆಲೆ?
Last Updated 27 ಜನವರಿ 2018, 11:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಆರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 11ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾದ ಮೊದಲ ಆಟಗಾರರನಾಗಿ ಶಿಖರ್‌ ಧವನ್‌ ಹೊರಹೊಮ್ಮಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌(ಎಸ್‌ಆರ್‌ಎಚ್‌) ತಂಡದಲ್ಲಿದ್ದ ಧವನ್‌ ಅವರನ್ನು ಕೊಂಡುಕೊಳ್ಳಲು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಫ್ರ್ಯಾಂಚೈಸ್‌ ₹ 5.20 ಕೋಟಿ ಬಿಡ್‌ ಮಾಡಿತ್ತು. ಈ ವೇಳೆ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಸಿದ ಎಸ್‌ಆರ್‌ಎಚ್‌ ಧವನ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಒಟ್ಟು 578 ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಎಂಟು ಫ್ರ್ಯಾಂಚೈಸ್‌ಗಳು ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಿವೆ.

2013ರಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎರಡು ವರ್ಷ ಅಮಾನತು ಶಿಕ್ಷೆ ಅನುಭವಿಸಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌ ತಂಡಗಳು ಈ ಬಾರಿ ಮರಳಲಿವೆ. ಹೋದ ವರ್ಷ ಇದ್ದ ಗುಜರಾತ್ ಲಯನ್ಸ್‌ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ತಂಡಗಳು ಈ ಬಾರಿ ನಿರ್ಗಮಿಸಿವೆ.

ಮಾರಾಟವಾದ ಆಟಗಾರರು

ಪೃಥ್ವಿ ಶಾ – ಡೆಲ್ಲಿ ಡೇರ್‌ಡೆವಿಲ್ಸ್‌ ₹ 1.2 ಕೋಟಿ

ಮನನ್‌ ವೋಹ್ರಾ – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ₹ 1.1 ಕೋಟಿ

ರಾಹುಲ್‌ ತ್ರಿಪಾಠಿ – ರಾಜಸ್ಥಾನ ರಾಯಲ್ಸ್‌ ₹ 3.4 ಕೋಟಿ

ಮಯಾಂಕ್‌ ಅಗರ್‌ವಾಲ್‌ – ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ₹ 1 ಕೋಟಿ

ರಿಕಿ ಭುಯಿ – ಸನ್‌ ರೈಸರ್ಸ್‌ ಹೈದರಾಬಾದ್‌ ₹ 20 ಲಕ್ಷ

ಇಶಾಂಕ್‌ ಜಗ್ಗಿ – ಕೊಲ್ಕತ್ತಾ ನೈಟ್‌ ರೈಡರ್ಸ್‌ ₹ 20 ಲಕ್ಷ

ಶುಭಮಾನ್‌ ಗಿಲ್‌ – ಕೊಲ್ಕತ್ತಾ ನೈಟ್‌ ರೈಡರ್ಸ್‌ ₹ 1.8 ಕೋಟಿ

ಸೂರ್ಯಕುಮಾರ್‌ ಯಾದವ್‌ – ಮುಂಬೈ ಇಂಡಿಯನ್ಸ್‌ ₹ 3.2 ಕೋಟಿ

ಕುಲದೀಪ್‌ ಯಾದವ್‌ – ಕೊಲ್ಕತ್ತಾ ನೈಟ್‌ ರೈಡರ್ಸ್‌ ₹ 5.8 ಕೋಟಿ

ಯಜುವೇಂದ್ರ ಚಹಾಲ್‌ – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ₹ 6 ಕೋಟಿ

ಅಮಿತ್‌ ಮಿಶ್ರಾ – ಡೆಲ್ಲಿ ಡೇರ್‌ ಡೆವಿಲ್ಸ್‌ ₹ 4 ಕೋಟಿ

ರಶೀದ್‌ ಖಾನ್‌ – ಸನ್‌ ರೈಸರ್ಸ್‌ ಹೈದರಾಬಾದ್‌ ₹ 9 ಕೋಟಿ

ಕರಣ್‌ ಶರ್ಮಾ – ಚೆನ್ನೈ ಸೂಪರ್‌ ಕಿಂಗ್ಸ್‌ ₹ 5 ಕೋಟಿ

ಇಮ್ರಾನ್‌ ತಾಹೀರ್‌ – ಚೆನ್ನೈ ಸೂಪರ್‌ ಕಿಂಗ್ಸ್‌ ₹ 1 ಕೋಟಿ

ಪಿಯೂಷ್‌ ಚಾವ್ಲಾ – ಕೊಲ್ಕತ್ತಾ ನೈಟ್‌ ರೈಡರ್ಸ್‌ ₹ 9.4 ಕೋಟಿ

ಶಿಖರ್‌ ಧವನ್‌ – ಸನ್‌ ರೈಸರ್ಸ್‌ ಹೈದರಾಬಾದ್‌ ₹ 5.2 ಕೋಟಿ

ಆರ್‌.ಅಶ್ವಿನ್‌ ಕಿಂಗ್ಸ್‌ – ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ₹ 7.6 ಕೋಟಿ

ಕೀರನ್‌ ಪೊಲಾರ್ಡ್‌ – ಮುಂಬೈ ಇಂಡಿಯನ್ಸ್‌ ₹ 5.4 ಕೋಟಿ

ಬೆನ್‌ ಸ್ಟೋಕ್ಸ್‌ – ರಾಜಸ್ಥಾನ ರಾಯಲ್ಸ್‌ ₹ 12.5 ಕೋಟಿ

ಫಾಫ್‌ ಡು ಪ್ಲೆಸಿ – ಚೆನ್ನೈ ಸೂಪರ್‌ ಕಿಂಗ್ಸ್‌ ₹ 1.6 ಕೋಟಿ

ಅಜಿಂಕ್ಯಾ ರಹಾನೆ – ರಾಜಸ್ಥಾನ ರಾಯಲ್ಸ್‌ ₹ 4ಕೋಟಿ

ಮಿಚೇಲ್‌ ಸ್ಟಾರ್ಕ್‌ – ಕೊಲ್ಕತ್ತಾ ನೈಟ್‌ ರೈಡರ್ಸ್‌ ₹ 9.4 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT