ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಆಮದು: ಜಗದೀಶ್ ಶೆಟ್ಟರ್ ಆರೋಪ ನಿರಾಧಾರ

Last Updated 27 ಜನವರಿ 2018, 6:51 IST
ಅಕ್ಷರ ಗಾತ್ರ

ಬೆಂಗಳೂರು: ₹5 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ಆದರೆ ₹37 ಲಕ್ಷದ ಮರಳು ಮಾತ್ರ ಬಂದಿದೆ. ಮಲೇಷ್ಯಾದಿಂದ ಮರಳು ಬಂದಿದ್ದು,  ಟೆಂಡರ್ ಇಲ್ಲದೆ ಮರಳು ಆಮದು ಮಾಡಿಲ್ಲ. 

₹12 ಸಾವಿರ ಟನ್ ಪ್ರತಿದಿನ ಮರಳು ದಾಸ್ತಾನು ಮಾಡುವ ಗುರಿಹೊಂದಿದ್ದು 935 ಟನ್ ಮರಳು ಆಮದು ಮಾಡಿಕೊಂಡಿದ್ದೇವೆ. ಶೆಟ್ಟರ್ ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ಉದ್ದೇಶದಿಂದ ಅವರು ಆರೋಪ ಮಾಡಿದ್ದಾರೆ ಎಂದು ವಿಕಾಸಸೌಧದಲ್ಲಿ ಮಾತನಾಡಿದ ಗಣಿ ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.

ಮರಳು ಮಾಫಿಯಾ ತಡೆಯಲು ಮಲೇಷ್ಯಾದಿಂದ ಆಮದು ಮಾಡುತ್ತಿದ್ದೀವಿ. ಅದೆಷ್ಟೇ  ಕಾನೂನು ಮಾಡಿದರೂ,  ಮರಳು ಮಾಫಿಯಾ ತಡೆಯೋದು ಕಷ್ಟವಾಗಿತ್ತು.  ಹೊಳೆಯಲ್ಲಿ ಮರಳು ತೆಗೆದ ಕಾರಣ ಅಂತರ್ಜಲ ಕುಸಿಯುತ್ತಿದೆ.

M sand ನಿಂದ ಮನೆ ಕಟ್ಟಲು ಸಾಧ್ಯವಿಲ್ಲ. ಕೇವಲ ರಸ್ತೆ ಕಾಮಗಾರಿಯಂತದ್ದಕ್ಕೆ ಅದನ್ನು ಬಳಸಬಹುದು.
ಪ್ರತಿ ಟನ್‌ಗೆ 4 ಸಾವಿರದಂತೆ ಆಮದು ಮಾಡಿಕೊಂಡ ಮರಳು ಮಾರಾಟ ಮಾಡಲಾಗುತ್ತಿದೆ. ಬಂದರಿನಲ್ಲೇ ಆಮದಾದ ಮರಳನ್ನು ಪ್ಯಾಕಿಂಗ್ ಮಾಡಲಾಗುತ್ತಿದ್ದ,ಯಾವ ಕಾರಣಕ್ಕೂ ಸ್ಥಳೀಯ ಮರಳನ್ನು ಮಿಶ್ರಣ ಮಾಡಲು ಅವಕಾಶವಿಲ್ಲ.

ಇದು ಮರಳು ಮಾಫಿಯಾದವರಿಗೆ ಏಟು ನೀಡಿದೆ.ಹೀಗಾಗಿ ಅವರ ಬೆಂಬಲಕ್ಕೆ ಶೆಟ್ಟರ್ ನಿಂತಿರಬಹುದು. ಅದಕ್ಕೇ ಅವರು ಆಧಾರ ರಹಿತ ಆರೋಪ ಮಾಡಿದ್ದಾರೆ.
ಎಂಎಸ್ ಐಎಲ್ ಸೇರಿ 8 ಸಂಸ್ಥೆಗೆ ಗುತ್ತಿಗೆ ಆಮದು ಟೆಂಡರ್ ನೀಡಲಾಗಿದೆ. ಈಗ  935 ಟನ್ ಮರಳು ಬಂದಿದೆ.
₹97 ಲಕ್ಷ ಮೌಲ್ಯದ ಮರಳು ಆಮದಾಗಿದೆ. ನಮ್ಮ 5 ವರ್ಷದ ಪ್ಲಾನ್ ₹5 ಸಾವಿರ ಕೋಟಿ. ₹5 ಸಾವಿರ ಕೋಟಿ ಮೌಲ್ಯದ ಮರಳು ಆಮದು ಮಾಡಿಕೊಳ್ಳುವುದು ಆಗಿದೆ.ಆದರೆ ಶೆಟ್ಟರ್ ಈಗಲೇ ₹5 ಸಾವಿರ ಕೋಟಿ ಮರಳು ಆಮದು ಆರೋಪ ಮಾಡುತ್ತಿದ್ದಾರೆ . ಅವರ ಈ ಆರೋಪ ನಿರಾಧಾರ ಎಂದ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT