ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಭಯವಿದೆ: ಕಣ್ಣೀರಿಟ್ಟ ಪದ್ಮನಾಭ

7
ಕೆಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಸುದ್ದಿಗೋಷ್ಠಿ

ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಭಯವಿದೆ: ಕಣ್ಣೀರಿಟ್ಟ ಪದ್ಮನಾಭ

Published:
Updated:
ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಭಯವಿದೆ: ಕಣ್ಣೀರಿಟ್ಟ ಪದ್ಮನಾಭ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ತೇರದಾಳ ಹಾಗೂ ಶಿಕಾರಿಪುರದಿಂದ ಕೆಜೆಪಿ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುವುದಾಗಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ೨೨೪ ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ ಅವರು, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಶೀಘ್ರವೇ ಹುಬ್ಬಳ್ಳಿಯಲ್ಲಿ ಮನೆ ಮಾಡುವೆ ಎಂದರು.

ಕಣ್ಣೀರಿಟ್ಟ ಪದ್ಮನಾಭ: ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಭಯವಿದೆ ಎಂದು ಅಳಲು ತೋಡಿಕೊಂಡ ಪದ್ಮನಾಭ ಪ್ರಸನ್ನಕುಮಾರ ನನಗೆ ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಕುಟುಂಬದ ಗತಿ ಏನು ಎಂದು ಸುದ್ದಿಗೋಷ್ಠಿಯಲ್ಲಿ ಅಲವತ್ತುಕೊಂಡು ಕಣ್ಣೀರಿಟ್ಟರು. ಜೀವ ಭಯದಿಂದ ಕಳ್ಳನಂತೆ ತಲೆತಪ್ಪಿಸಿಕೊಂಡು ಓಡಾಡಬೇಕಿದೆ. ಕಾರಿನಿಂದ ಕೆಳಗೆ ಇಳಿದರೆ ಯಾರಾದರೂ ತೊಂದರೆ ಮಾಡಿಯಾರು ಎಂಬ ಆತಂಕ ಎದುರಿಸುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿನ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿಪತ್ರ ಸಲ್ಲಿಸಿ ಭದ್ರತೆ ಸಲ್ಲಿಸುವಂತೆ ಕೋರಿದ್ದೇನೆ. ಆದರೆ ಯಾವುದೇ ಉಪಯೋಗವಿಲ್ಲ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹೇಳಿದರು.


ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಕೇರಳದ ಭಗವತಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಅದರ ಸಿಡಿ ನನ್ನ ಕಡೆ ಇದೆ. ಅದನ್ನು ಬಿಡುಗಡೆ ಮಾಡಲು ಮುಂದಾದ ಕಾರಣ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಈಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಭದ್ರತೆ ನೀಡಿದರೆ ಸಿಡಿ ಬಿಡುಗಡೆ ಮಾಡುವೆ ಎಂದರು.


ಯಡಿಯೂರಪ್ಪ ಕೆಜೆಪಿಯಲ್ಲಿಯೇ ಇದ್ದರೆ ಈ ಬಾರಿ ಅಧಿಕಾರಕ್ಕೆ ಬರುತ್ತಿತ್ತು. ಪಕ್ಷದ ದುಸ್ಥಿತಿ ಹಾಗೂ ಯಡಿಯೂರಪ್ಪ ಹಾಳಾಗಲು ಶೋಭಾ ಕರಂದ್ಲಾಜೆ ಅವರೇ ಕಾರಣ ಎಂದು ಆರೋಪಿಸಿದ ಪದ್ಮನಾಭ ಪ್ರಸನ್ನ, ಯಡಿಯೂರಪ್ಪ ಮೂಲತಃ ಒಳ್ಳೆಯ ಮನುಷ್ಯ.ಜನಾನುರಾಗಿ ಕರಂದ್ಲಾಜೆಯೇ ಅವರನ್ನು ನಾಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry