ಕಾಂಗ್ರೆಸ್ ಅನ್ನು ಮುಗಿಸಲು ಸಿದ್ದರಾಮಯ್ಯನವರಿಗೆ ಯಾರೋ ಸುಪಾರಿ ಕೊಟ್ಟಿದ್ದಾರೆ

7

ಕಾಂಗ್ರೆಸ್ ಅನ್ನು ಮುಗಿಸಲು ಸಿದ್ದರಾಮಯ್ಯನವರಿಗೆ ಯಾರೋ ಸುಪಾರಿ ಕೊಟ್ಟಿದ್ದಾರೆ

Published:
Updated:
ಕಾಂಗ್ರೆಸ್ ಅನ್ನು ಮುಗಿಸಲು ಸಿದ್ದರಾಮಯ್ಯನವರಿಗೆ ಯಾರೋ ಸುಪಾರಿ ಕೊಟ್ಟಿದ್ದಾರೆ

ಬೆಂಗಳೂರು: ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಸಿದ್ದರಾಮಯ್ಯ ತುಘಲಕ್ ದರ್ಬಾರು ನಡೆಸಿದ್ದಾರೆ. ಅವರು ಓಲೈಕೆಯ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶೋಭಾ ಕರಂದ್ಲಾಜೆ,  ಅಲ್ಪಸಂಖ್ಯಾತ ಕೈದಿಗಳ ಬಿಡುಗಡೆ ಸುತ್ತೋಲೆ ವಾಪಸು ಪಡೆಯಲು ಆಗ್ರಹಿಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದ ಅವರು, ಟಿಪ್ಪು ಜಯಂತಿ ಆಚರಣೆಯಿಂದಲೇ ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ.

ಸಿದ್ದರಾಮಯ್ಯ ಭಯೋತ್ಪಾದಕರು ಹಾಗೂ ಕೊಲೆಗಡುಕ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್ ಶವಪೆಟ್ಟಿಗೆಗೆ ಅವರೇ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯನವರೇ, ಅಲ್ಪಸಂಖ್ಯಾತರು ಏನು ಮಾಡಿದ್ರೂ ಅವರನ್ನು ಫ್ರೀ ಬಿಟ್ಟುಬಿಡಿ. ರಾಜ್ಯದ ಎಲ್ಲ ಜೈಲುಗಳ ಬಾಗಿಲುಗಳನ್ನೂ ತೆರೆದುಬಿಡಿ.

ಸಿದ್ದರಾಮಯ್ಯ ಅವರು ಮತಕ್ಕಾಗಿ ಏನು ಮಾಡಲಿಕ್ಕೂ ಸಿದ್ಧ ಎಂದು ತೋರಿಸಿಕೊಡುತ್ತಿದ್ದಾರೆ. ನಾನೂ ಹಿಂದೂ ಎನ್ನುವ ಅವರ ಗೋಮುಖ ವ್ಯಾಘ್ರ ಎಲ್ಲರಿಗೂ ಗೊತ್ತಾಗುತ್ತಿದೆ. ಅವರು ತೆಗೆದುಕೊಂಡಿರುವ ಈ ಕರಾಳ ನಿರ್ಧಾರದಿಂದ ಕಾಂಗ್ರೆಸ್ ನಿರ್ನಾಮ ಆಗಲಿದೆ. ಕಾಂಗ್ರೆಸ್ ಅನ್ನು ಮುಗಿಸಲು ಸಿದ್ದರಾಮಯ್ಯನವರಿಗೆ ಯಾರೊ ಸುಪಾರಿ ಕೊಟ್ಟಿದ್ದಾರೆ ಎಂದಿದ್ದಾರೆ ಶೋಭಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry